ನನಗೆ ರಾಜಕೀಯಕ್ಕಿಂತ ಧರ್ಮವೇ ಮುಖ್ಯ ಅಂದ್ರು ಸಂಸದ ಪ್ರತಾಪ್ ಸಿಂಹ !! ಭಾರೀ ಪ್ರತಿಭಟನೆ!!

MP Pratap Simha's Twitter on Hanuma Jayanti Issue.
MP Pratap Simha's Twitter on Hanuma Jayanti Issue.

ನನಗೆ ರಾಜಕೀಯಕ್ಕಿಂತ ಧರ್ಮವೇ ಮುಖ್ಯ ಎಂದು ಪೊಲೀಸ್ ಬಂಧನದಿಂದ ಬಿಡುಗಡೆಯಾದ ತಕ್ಷಣ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಹನುಮಜಯಂತಿ ವೇಳೆ ನಿಷೇದಿತ ಪ್ರದೇಶದಲ್ಲಿ ರ‌್ಯಾಲಿ ಮಾಡಿದ್ದಲ್ಲದೆ ತಡೆಯಲು ಬಂದ ಪೊಲೀಸರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಆರೋಪದ ಹಿನ್ನಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. 9 ಗಂಟೆಗಳ ಪೊಲೀಸ್ ಬಂಧನದಿಂದ ಇದೀಗ ಪ್ರತಾಪ್ ಸಿಂಹ ಬಿಡುಗಡೆಗೊಂಡಿದ್ದು, ನನಗೆ ಧರ್ಮವೇ ಮುಖ್ಯ ಹೊರತು ರಾಜಕೀಯವಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ಮತ್ತೊಂದೆಡೆ ಸಂಸದ ಪ್ರತಾಪ್​ ಸಿಂಹ ರಿಲೀಸ್ ನಂತರವೂ ಆಕ್ರೋಶ ಕಡಿಮೆಯಾಗಿಲ್ಲ. ಹುಣಸೂರು ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿ ಯುವ ಮೋರ್ಚವು ಹುಣಸೂರು ಪಟ್ಟಣವನ್ನು ಬಂದ್ ಮಾಡಲು ಮುಂದಾಗಿದೆ.

ಬಿಜೆಪಿ
ಬಂದ್​ ಹಿನ್ನೆಲೆಯಲ್ಲಿ ಹುಣಸೂರಿಗೆ ಬಾರೀ ಬಂದೋಬಸ್ತ್​​​ ಏರ್ಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಶಾಲೆ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ. ಸೂಕ್ಷ್ಮ, ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್​ ನಿಯೋಜನೆ ಮಾಡಲಾಗಿದೆ.

From the web

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here