ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದ ಸಂಭ್ರಮ! ಮಗಳ ಜೊತೆ ಧೋನಿ ಸೆಲಿಬ್ರೇಶನ್ ಹೇಗಿತ್ತು ಗೊತ್ತಾ!!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ, ಇನ್ನೂ ಮಹೇಂದ್ರ ಸಿಂಗ್ ಧೋನಿ ತಮ್ಮ ಹುಟ್ಟುಹಬ್ಬವನ್ನು ಮಗಳು ಝಿವಾ ಜೊತೆ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ.

ad

View this post on Instagram

Happy Bday ❤️

A post shared by Sakshi Singh Dhoni (@sakshisingh_r) on

ಹೌದು ಧೋನಿ ತಮ್ಮ ಹುಟ್ಟುಹಬ್ಬವನ್ನು ಮಗಳು ಝಿವಾ ಜೊತೆ ಕೇಕ್ ಕತ್ತರಿಸಿ ಮಗಳ ಜೊತೆ ಡ್ಯಾನ್ಸ್ ಮಾಡುವುವ ಮೂಲಕ ಆಚರಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇನ್ನೂ ಈ ಸಂಭ್ರಮಾಚರಣೆಯಲ್ಲಿ ಭಾರತದ ಕ್ರಿಕೆಟ್ ತಂಡದ ಆಟಗಾರರಾದ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಕೂಡ ಪಾಲ್ಗೊಂಡಿದ್ದರು.

View this post on Instagram

Happy Bday boy !

A post shared by Sakshi Singh Dhoni (@sakshisingh_r) on

ಇನ್ನೂ ಧೋನಿ ಹುಟ್ಟು ಹಬ್ಬದ ಆಚರಣೆಯ ಫೋಟೋವನ್ನು ಅವರ ಪತ್ನಿ ಸಾಕ್ಷಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ಯಾಫ್ಟನ್ ಕೂಲ್ ಗೆ ವಿಶ್ವಾದ್ಯಂತ ಅಭಿಮಾನಿಗಳು ಶುಭಾಷಯಗಳ ಸುರಿಮಳೆಯೇ ಹರಿದುಬರುತ್ತಿದೆ. ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ವಿಶ್ವದಲ್ಲಿ ಏಳು ಖಂಡಗಳು, ವಾರದಲ್ಲಿ ಏಳು ದಿನಗಳು, ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳು, ವಿಶ್ವದಲ್ಲಿ ಏಳು ಅದ್ಭುತಗಳು ಹಾಗೆಯೇ ಏಳನೇ ತಿಂಗಳ ಏಳನೇ ದಿನ ಕ್ರಿಕೆಟಿಂಗ್ ಪ್ರಪಂಚದ ಅದ್ಭುತ ಜನ್ಮ ದಿನ ಎಂದು ಟ್ಟೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

ಜೊತೆಗೆ ವಿಡಿಯೋ ಒಂದರಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಧೋನಿ ಅವರು ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ಸಹಾಯ ಮಾಡಬಲ್ಲ ಆಟಗಾರ ಮತ್ತು ನಾಯಕನಾಗಿ ಅತ್ಯಂತ ತಾಳ್ಮೆ ಇರುವ ಆಟಗಾರ ಅವರು ಎಂದಿಗೂ ನನ್ನ ನಾಯಕ ಎಂದು ಹೇಳಿದ್ದಾರೆ. ಅಲ್ಲದೆ ಮತ್ತೊಂದು ವಿಡಿಯೋದಲ್ಲಿ ಇಂಗ್ಲೆಂಡ್‍ನ ಆಟಗಾರ ಬೆನ್ ಸ್ಟೋಕ್ಸ್ ಅವರು ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮತ್ತು ವಿಕೆಟ್ ಕೀಪರ್ ಅವರಂಥ ಆಟಗಾರ ಮತ್ತೊಬ್ಬ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದರೊಂದಿಗೆ ಐಸಿಸಿ ವಿಡಿಯೋವೊಂದನ್ನು ಹಾಕುವ ಮೂಲಕ ಧೋನಿ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ಭಾರತೀಯ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಆಟಗಾರ. ಧೋನಿ ಎಂಬ ಹೆಸರು ಜಗತ್ತಿನ ಕೋಟ್ಯಂತರ ಮಂದಿಗೆ ಸ್ಫೂರ್ತಿ. ಅವರ ಹೆಸರು ಅಳೆಯಲಾಗದ ಅಸ್ತಿ ಎಂದು ಹೇಳಿದ್ದು, ಈ ವಿಡಿಯೋದಲ್ಲಿ 2007ರ ಟಿ20 ವಿಶ್ವಕಪ್ ಗೆದ್ದ ಕ್ಷಣ, 2011 ರ ವಿಶ್ವಕಪ್ ಗೆದ್ದ ಕ್ಷಣ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಐತಿಹಾಸಿಕ ಕ್ಷಣಗಳನ್ನು ಹಾಕಲಾಗಿದೆ.

ಜೊತೆಗೆ ಹಲವಾರು ಕ್ರಿಕೆಟ್ ಆಟಗಾರರು ಧೋನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಇದನ್ನು ಬಿಟ್ಟರೆ ಭಾರತದ ಮಾಜಿ ಆಟಗಾರ ವಿವಿಸ್ ಲಕ್ಷ್ಮಣ್ ಅವರು ಮತ್ತು ಟೀಂ ಇಂಡಿಯಾ ಆಟಗಾರ ವಿಜಯ್ ಶಂಕರ್ ಇನ್ನೂ ಮುಂತಾದವರು ಧೋನಿಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಿದ್ದಾರೆ.

https://twitter.com/VVSLaxman281/status/1147664005730918410/photo/1