ಕಾರ್ಯಕ್ರಮದಲ್ಲೇ ಐಶ್ವರ್ಯ ಅತ್ತಿದ್ದೇಕೆ ?


ಸೆಲಿಬ್ರೆಟಿಗಳು ಮಾಧ್ಯಮ ಮತ್ತು ಅಭಿಮಾನಿಗಳ ಬಗ್ಗೆ ಕೋಪಗೊಳ್ಳೋದು ಸಾಮಾನ್ಯ. ಇದೀಗ ಈ ಸಾಲಿಗೆ ವಿಶ್ವಸುಂದರಿ ಹಾಗೂ ಬಿಗ್ ಬಿ ಸೊಸೆ ಐಶ್ವರ್ಯ ರೈ ಬಚ್ಚನ್ ಕೂಡಾ ಸೇರ್ಪಡೆಯಾಗಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪೋಟೋಗ್ರಾಫರ್ಸ್ ಹಾಗೂ ಮೀಡಿಯಾ ಪ್ರತಿನಿಧಿಗಳ ಅತಿರೇಕದ ವರ್ತನೆಯಿಂದ ನೊಂದ ಐಶ್ವರ್ಯ ಪುತ್ರಿ ಎದುರೇ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು ಮೀಡಿಯಾ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಐಶ್ವರ್ಯ ರೈ ನಿನ್ನೆ ಇತ್ತಿಚೆಗೆ‌ ನಿಧನರಾದ ತಮ್ಮ ತಂದೆ ಹುಟ್ಟುಹಬ್ಬವನ್ನು ರೋಗಿಗಳೊಂದಿಗೆ ಆಚರಿಸಲು ಮುಂಬೈನ ಶಶ್ರುಷಾ ಆಸ್ಪತ್ರೆಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಐಶ್ವರ್ಯಾ ಪುತ್ರಿ ಆರಾಧ್ಯ ಹಾಗು ತಾಯಿ ಬೃಂದಾ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ ಪೋಟೋಗ್ರಾಫರ್‌ಗಳು ಐಶ್ವರ್ಯಾ ಹಾಗೂ ಆರಾಧ್ಯಾ ಪೋಟೋ ತೆಗೆಯಲು ಮುಗಿಬಿದ್ದಿದ್ದು ಸ್ಥಳದಲ್ಲಿ ನೂಕು ನುಗ್ಗಲು ಹಾಗೂ ಗಲಾಟೆಯ ವಾತಾವರಣ ಸೃಷ್ಟಿಸಿದರು.

ಇದನ್ನು ಕಂಡು ಗರಂ ಆದ ಐಶ್ವರ್ಯಾ ನಿಧಾನವಾಗಿ ಪೋಟೋ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ‌ ಬರಲಿಲ್ಲ. ಇದರಿಂದ ಕೋಪಗೊಂಡ ಐಶ್ವರ್ಯಾ ದಯವಿಟ್ಟು ಖಾಸಗಿತನವನ್ನು ಗೌರವಿಸಿ. ಕಾರ್ಯಕ್ರಮ ವನ್ನು ನಡೆಸಲು  ಅವಕಾಶ ಕೊಡಿ ಎಂದು ಖಾರವಾಗಿಯೇ ಹೇಳಿದರು‌. ಈ ವೇಳೆ ಐಶ್ವರ್ಯ ಕೆಲಕಾಲ ಭಾವುಕರಾಗಿ ಕಣ್ಣಿರು ಸುರಿಸಿದ ಘಟನೆಯು ನಡೆಯಿತು. ಇದನ್ನು ಚಿತ್ರೀಕರಿಸಿದ ಮೀಡಿಯಾಗಳು ಅದನ್ನೆ ದೊಡ್ಡ ಸುದ್ದಿಯಾಗಿಸಿದ್ದು, ನಿನ್ನೆಯಿಂದ ಐಶ್ಬರ್ಯಾ ಕಣ್ಣಿರು ಹಾಕಿದ‌ ವಿಡಿಯೋ ಮತ್ತು ನ್ಯೂಸ್ ಸಖತ್‌ ವೈರಲ್ ಆಗಿದೆ.