ಮುಂಬೈನಲ್ಲಿ ಅತೃಪ್ತರ ಟೆಂಪಲ್​ ರನ್​! ಸಿದ್ಧವಿನಾಯಕನ ಮೊರೆ ಹೋದ ರೆಬೆಲ್ ಶಾಸಕರು!!

ಅತೃಪ್ತಿಯೊಂದಿಗೆ ಮುಂಬೈ ಸೇರಿರುವ ಕಾಂಗ್ರೆಸ್​-ಜೆಡಿಎಸ್ ಶಾಸಕರು ಸುಪ್ರೀಂ ಕೋರ್ಟ್​ ಆದೇಶದಿಂದ ಸಧ್ಯಕ್ಕೆ ರಿಲೀಫ್​ ಪಡೆದಿದ್ದು, ಇದೇ ಖುಷಿಯಲ್ಲಿ ಟೆಂಪನ್ ರನ್ ಆರಂಭಿಸಿದ್ದಾರೆ.

ad

 

ಮುಂಬೈನ ಸಿದ್ಧಿವಿನಾಯಕ ಟೆಂಪಲ್​ಗೆ ಭೇಟಿ ನೀಡಿದ ಅತೃಪ್ತ ಶಾಸಕರು ಪೂಜೆ ಸಲ್ಲಿಸಿದ್ದಾರೆ. ಜುಲೈ 6 ರಂದು  ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ  ಸ್ಪೀಕರ್​ಗೆ ನಿರ್ದೇಶನ ನೀಡುವಂತೆ ಸುಪ್ರೀಂ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಿನ್ನೆ ಸಂಜೆ 6 ಗಂಟೆಯೊಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಸೂಚಿಸಿತ್ತು. ನಿನ್ನೆ ಸ್ಪೀಕರ್ ಕಚೇರಿಗೆ ಆಗಮಿಸಿದ್ದ ಶಾಸಕರು ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ಮರಳಿದ್ದರು.

ಇಂದು ಸುಪ್ರೀಂ ಕೋರ್ಟ್​ನಲ್ಲಿ ಅತೃಪ್ತರ ಅರ್ಜಿ ವಿಚಾರಣೆ ನಡೆದಿದ್ದು,  ಮುಂದಿನ ವಿಚಾರಣೆಗಾಗಿ ಮಂಗಳವಾರಕ್ಕೆ  ಅರ್ಜಿ ಮುಂದೂಡಿಕೆಯಾಗಿದೆ. ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿರುವುದರಿಂದ  ಸಧ್ಯಕ್ಕೆ ನಿರಾಳವಾಗಿರುವ  ಅತೃಪ್ತ ಶಾಸಕರು, ಮುಂಬೈನ ಪ್ರಸಿದ್ಧ ಹಾಗೂ ವಿಘ್ನ ವಿನಾಶಕ ದೇವಸ್ಥಾನ ಎಂದೇ ಹೆಸರಾಗಿರುವ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.