ಮುನಿರತ್ನಗೆ ಒಲಿದ ರಾಜರಾಜೇಶ್ವರಿ- ಎರಡನೇ ಭಾರಿ ಗೆದ್ದು ಬೀಗಿದ ಮುನಿರತ್ನ- ಮೂರನೇ ಸ್ಥಾನ ಪಡೆದ ಜೆಡಿಎಸ್​ ಅಭ್ಯರ್ಥಿ!

 

ad


ರಾಜ್ಯದಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿದ್ದ ರಾಜರಾಜೇಶ್ವರಿ ನಗರ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ನೀರಿಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಎರಡನೇ ಭಾರಿ ಜಯಗಳಿಸಿದ್ದಾರೆ. ಅಪಾರ ಪ್ರಮಾಣದ ಓಟರ್​ ಐಡಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಮುಂದೂಡಲಾಗಿತ್ತು. ಸೋಮವಾರ ಮತದಾನ ನಡೆದಿದ್ದು, ಇಂದು ನಡೆದ ಮತ ಎಣಿಕೆಯಲ್ಲಿ ಮುನಿರತ್ನ ಗೆಲುವಿನ ಹಾರ ಧರಿಸಿದ್ದಾರೆ.

 

ಕಾಂಗ್ರೆಸ್​ನಿಂದ ಮುನಿರತ್ನ, ಬಿಜೆಪಿಯಿಂದ ತುಳಸಿ ಮುನಿರಾಜ್ ಹಾಗೂ ಜೆಡಿಎಸ್​​ನಿಂದ ಬಿಜೆಪಿ ರೆಬೆಲ್​ ನಾಯಕ ಜಿ.ಎಚ್.ರಾಮಚಂದ್ರ ಹಾಗೂ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಹುಚ್ಚವೆಂಕಟ ಸೇರಿ ಒಟ್ಟು 14 ಕ್ಯಾಂಡಿಡೇಟ್​​ ಗಳು ಕಣದಲ್ಲಿದ್ದರು. ಮತ ಎಣಿಕೆಯ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು 14 ನೇ ಸುತ್ತಿನವರೆಗೂ ಇದೇ ಮುನ್ನಡೆ ಸಾಧಿಸಿದರು. ಅಂತಿಮವಾಗಿ ಮುನಿರತ್ನ 25,492 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಗೆಲ್ಲುವ ಭರವಸೆ ಮೂಡಿಸಿದ್ದ ಜೆಡಿಎಸ್​ ಅಭ್ಯರ್ಥಿ ಜಿ.ಎಚ್.ರಾಮಚಂದ್ರ, ಒಟ್ಟು 60360 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಸಾಕಷ್ಟು ವಿರೋಧಗಳ ನಡುವೆಯೂ ಬಿಜೆಪಿಯಿಂದ ಟಿಕೇಟ್ ಪಡೆದುಕೊಂಡಿದ್ದ ತುಳಸಿಮುನಿರಾಜು ಅವರು 82 ಸಾವಿರದ 572 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಹಲವು ಆರೋಪಗಳ ಬಳಿಕವೂ ಆರ್.ಆರ್.ನಗರದಲ್ಲಿ ವಿಜಯದ ಹಾರವನ್ನು ಮುನಿರತ್ನ ಪಡೆದುಕೊಂಡಿದ್ದು, ಇದು ಮುನಿರತ್ನ ಅವರ ಎರಡನೇ ಗೆಲುವಾಗಿದೆ.