ಕರಾವಳಿ ಕಮಲ ಪಾಳೆಯದಲ್ಲಿ ಗುಸು ಗುಸು..,ಈ ಬಾರಿ ಸೀಟು ಯಾರಿಗೆ..?

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಯ ಮಟ್ಟಿಗೆ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸುವ ಮಂಗಳೂರು ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಸೀಟು ಸಿಗಲಿದೆ ಎಂಬುದು ಸದ್ಯಕ್ಕಿರುವ ಗೊಂದಲ.  ಒಂದೆಡೆ ಬಿಜೆಪಿ ಸಂಸದ ನಳೀನ್​​ಕುಮಾರ್​​ಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದ್ದರೆ  ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ರವರ ಪರವಾಗಿ ಹಲವು ಪ್ರಮುಖ ಮುಖಂಡರು ನಿಂತಿದ್ದಾರೆ.

ಈಗಾಗಲೇ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಚುಣಾವಣಾ ಪ್ರಚಾರದಲ್ಲಿ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದು  ಚುನಾವಣೆಯಲ್ಲಿ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

 

 

ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿರುವ ಸತ್ಯಜಿತ್ ಸುರತ್ಕಲ್ ಅವ ಲೋಕಸಭಾ ಚುನಾವಣೆಯ ನಮ್ಮ ಮುಂದಿನ ಆಯ್ಕೆ ಎಂಬ ಫಲಕಗಳು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಣಿಸತೊಡಗಿವೆ. ಮೊದ ಮೊದಲು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತಿದ್ದ ಕೂಗು ಇದೀಗ ಫ್ಲೆಕ್ಸ್ ಸಮರಕ್ಕೂ ಮುಂದಾಗಿದೆ. ಮೋದಿ ಕನಸನ್ನು ನನಸು ಮಾಡಲು , ಸ್ಮಾರ್ಟ್ ಇಂಡಿಯಾದ ಪ್ರಧಾನಿಗೆ ಬಿಜೆಪಿ ಹಾಗೂ ಸಮಸ್ತ ಹಿಂದೂ ಸಂಘಟನೆಯ ಕಾರ್ಯಕರ್ತರ ಆಯ್ಕೆ ಸತ್ಯಜೀತ್ ಸುರತ್ಕಲ್ ಎಂಬ ಒಕ್ಕಣೆಯುಳ್ಳ ಫ್ಲೆಕ್ಸ್ ಜಿಲ್ಲೆಯಲ್ಲಿ ಅಲ್ಲಲ್ಲಿ ಕಾಣತೊಡಗಿದೆ.