ಮಠಕ್ಕೆ ವಾಪಸ್ಸಾದ ಮುರುಘಾಶ್ರೀ

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಮುರುಘಾಶರಣರು ಆಸ್ಪತ್ರೆಯಿಂದ ಮಠಕ್ಕೆ ವಾಪಸ್ಸಾಗಿದ್ದಾರೆ.

ಕಫ ಹಾಗೂ ಶೀತದ ಸಮಸ್ಯೆಯಿಂದ ಚಿಕಿತ್ಸೆಗಾಗಿ ಜೂನ್ 8 ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಸೇರಿದ್ದ ಡಾ.ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಮಠಕ್ಕೆ ವಾಪ್ಪಾಸಾಗಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಸಂಜೆ ವೇಳೆಗೆ ಮಠಕ್ಕೆ ಆಗಮಿಸಿದ್ರು.

ಮಠಕ್ಕೆ ಆಗಮಿಸುತ್ತಿದ್ದಂತೆ ಭಕ್ತಾದಿಗಳು ಶ್ರೀಗಳನ್ನ ಸ್ವಾಗತಿಸಿದ್ರು. ಇನ್ನು ವೇಳೆ ಮಾತಾನಾಡಿದ ಶ್ರೀಗಳು ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ, ವೈದ್ಯರ ಸಲಹೆಮೇರೆಗೆ ಚಿಕಿತ್ಸೆ ಪಡೆದು ಇಂದು ವಾಪ್ಪಾಸ್ಸಾಗಿದ್ದೇನೆ, ಭಕ್ತರು ಯಾವುದೇ ಆತಂಕಪಡಬೇಕಿಲ್ಲ ಎಂದರು.