ಅಯ್ಯಪ್ಪ ವ್ರತಧಾರಿಯಾದ ಅನ್ವರ್- ಧರ್ಮಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದ ಮುಸ್ಲಿಂ ವ್ಯಕ್ತಿ

Muslium Man
Muslim Man Follows hindu ceremony At Vijayapura.

ರಾಜ್ಯದಲ್ಲಿ ಎಲ್ಲೆಡೆ ನೈತಿಕಪೊಲೀಸಗಿರಿ ಸುದ್ದಿಯಾಗ್ತಿದ್ದು, ಹಿಂದು-ಮುಸ್ಲಿಂ ಧರ್ಮದ ನಡುವೆ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಲೇ ಇದೆ.

ಆದರೇ ಇಲ್ಲೊಬ್ಬ ವ್ಯಕ್ತಿ ಮಾತ್ರ ಧರ್ಮವೊಂದೆ ನಾಮ ಹಲವು ಎಂಬ ತತ್ವದ ಪಾಲಿಸುತ್ತಿದ್ದು, ಮುಸ್ಲಿಂ ಧರ್ಮಕ್ಕ ಸೇರಿದ್ದರೂ ಅಯ್ಯಪ್ಪ ವೃತದಾರಿಯಾಗಿ ಅಚ್ಚರಿ ಮೂಡಿಸಿದ್ದಾರೆ. ವಿಜಯಪುರದ ಅಲಿಯಾಬಾದ್ ನಿವಾಸಿ ಅನ್ವರ್ ಹೀಗೆ ಧರ್ಮ-ಧರ್ಮಗಳ ನಡುವೆ ಸಾಮರಸ್ಯ ಮೂಡಿಸಿದ ವ್ಯಕ್ತಿ. ತಮ್ಮ ಕುಟುಂಬದ ಕಷ್ಟಗಳಿಂದ ಬೇಸತ್ತ ಅನ್ವರ್​ ಕಳೆದ 5 ವರ್ಷದ ಹಿಂದೆ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದರು. ಆಗ ತಮ್ಮ ಸಮಸ್ಯೆಗಳು ಪರಿಹಾರವಾಗಿದ್ದರಿಂದ ಪ್ರೇರಿತರಾದ ಅನ್ವರ್​ ಕಳೆದ 5 ವರ್ಷಗಳಿಂದ ಸತತವಾಗಿ ಮಾಲೆ ಧರಿಸಿ ಅಯ್ಯಪ್ಪನ ವೃತ ಪಾಲಿಸುತ್ತ ಬಂದಿದ್ದಾರೆ.

 

 

 

 

ಆರಂಭದಲ್ಲಿ ಅನ್ವರಗೂ ಸಮಾಜದ ಹಲವು ಮುಖಂಡರಿಂದ ಟೀಕೆ ಎದುರಾಗಿತ್ತದರೂ ಇದೀಗ ಅವರೆಲ್ಲರೂ ಅನ್ವರ್​​ನ್ನು ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ. ಮೂರು ದಿನ ಮಾತ್ರ ವೃತಧಾರಿಯಾಗುವ ಅನ್ವರ್ ಬಳಿಕ ಪೂಜೆ ಸಲ್ಲಿಸಿ ಬಳಿಕ ಶಬರಿಮಲೈಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದುಬರುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಧರ್ಮ-ಜಾತಿ ಎಂದೆಲ್ಲ ಹೊಡೆದಾಡುವ ಜನರ ಮಧ್ಯೆ ಅನ್ವರ್​​ ಧರ್ಮ ಹಲವಾದರೂ ನಾಮ ಒಂದೇ ರೀತಿ ಎಂಬಂತೆ ಧರ್ಮ-ಧರ್ಮಗಳ ನಡುವೆ ಸಮನ್ವಯತೆ ಮೂಡಿಸುವ ಕೆಲಸ ಮಾಡುತ್ತಿರೋದರು ನಿಜಕ್ಕೂ ಶ್ಲಾಘನೀಯ.

ಪ್ರತ್ಯುತ್ತರ ನೀಡಿ

Please enter your comment!
Please enter your name here