ಹನುಮ ‌ಗುಲಾಮಗಿರಿ ಸಂಕೇತ- ಮೈಸೂರು ಪ್ರೊಫೆಸರ್ ವಿವಾದಾತ್ಮಕ ಹೇಳಿಕೆ

ಧರ್ಮ-ದೇವರ ಹೆಸರಿನಲ್ಲಿ ರಾಜ್ಯದಲ್ಲಿ‌ ಕೋಮುಸಾಮರಸ್ಯ ಕದಡಿರುವ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್​ ಮಹೇಶ್​ಚಂದ್ರಗುರು ಮತ್ತೊಮ್ಮೆ ಹಿಂದೂ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅವಾಂತರ‌ ಸೃಷ್ಟಿಸಿದ್ದಾರೆ. ಹನುಮಂತ ಗುಲಾಮಗಿರಿಯ ಸಂಕೇತ ಎಂದು ಮಹೇಶಚಂದ್ರ ಗುರು ಹೇಳಿಕೆ‌ ನೀಡಿದ್ದು, ಈ ಹೇಳಿಕೆ‌ ಇದೀಗ ಆಸ್ತಿಕ ವರ್ಗವನ್ನು ಕೆರಳಿಸಿದೆ. ಹನುಮ ಜಯಂತಿಯಲ್ಲಿ ಪ್ರಕ್ಷುಬ್ಧಗೊಂಡಿದ್ದ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಸಿ‌ ಮಾತನಾಡುತ್ತಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ. ಹಿಂದೂ ದೇವರಿಗೆ ಅವಮಾನ ಮಾಡಿದ್ದಾರೆ. ತಮಿಳುನಾಡಿ ಸಾಮಾಜಿಕ ಹೋರಾಟಗಾರ ಪೆರಿಯಾರ್​ ವಿಚಾರಗಳನ್ನು ಮುಂದಿಟ್ಟುಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ ಅವರು, ರಾಮ ಎಂಬುವನು ಪ್ರಭುತ್ವದ ಸಂಕೇಂತ. ಹನುಮಂತ ಗುಲಾಮಗಿರಿಯನ್ನು ಒಪ್ಪಿಕೊಂಡವನಾಗಿದ್ದು, ಗುಲಾಮಗಿರಿಯ ಸಂಕೇತ ಎಂದು ಹೇಳಿದ್ದಾರೆ. ಹನುಮ ಜಯಂತಿ ಆಚರಣೆ ಹಿಂದೆ ಸಾಂಸ್ಕೃತಿಕ ಸಾಮ್ರಾಜ್ಯಶಾಹಿಗಳ ಕುತಂತ್ರ ಅಡಗಿದೆ. ಅವರಿಗೆ ಸ್ವಾಭಿಮಾನಿಗಳು, ಸ್ವಾವಲಂಬಿಗಳನ್ನ ಸೃಷ್ಟಿ ಮಾಡೋದು ಬೇಕಾಗಿಲ್ಲ.

ಹನುಮಂತನನಂತಹ ಗುಲಾಮರನ್ನು ಸೃಷ್ಟಿ ಮಾಡೋದೇ ಅವರ ಗುಪ್ತ ಅಜೆಂಡವಾಗಿದ್ದು, ದೇಶದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ ಮಾಧ್ಯಮ ಸಾಮ್ರಾಜ್ಯಶಾಹಿ ನಿರ್ಮಾಣವಾಗ್ತಿದೆ ಎಂದು ಕಿಡಿಕಾರಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ ಫ್ರೊಪೆಸರ್​, ಈ ದೇಶದ ಮೂಲ ನಿವಾಸಿಗಳಿಗೆ ಪ್ರಸ್ತುತ ಸರ್ಕಾರದಲ್ಲಿ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಹಿಂದೆ ಕ್ವಿಟ್​ ಇಂಡಿಯಾ ಚಳವಳಿ ದೇಶದಲ್ಲಿ ನಡೆದಿತ್ತು. ಈಗ ನಾವು ಕ್ವಿಟ್​ ಎನ್.ಡಿ.ಎ ಚಳವಳಿ ಮಾಡಬೇಕಿದೆ. ಎನ್.ಡಿ.ಎ ಎಂದರೆ ನ್ಯಾಷನಲ್​ ಡೆಮಕ್ರಟಿಕ್​ ಅಲಯನ್ಸ್​ ಅಲ್ಲ, ಅದು ನ್ಯಾಷಿನಲ್​ ಡೆಸ್ಟ್ರಕ್ಷನ್​ ಅಲಯನ್ಸ್​. ಎನ್​.ಡಿ.ಎ ಸಮಸ್ತ ಭಾರತೀಯರನ್ನು ನಾಶ ಮಾಡಲು ಹೊರಟಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ಕರೆ ಕೊಟ್ಟರು. ದೇವರಾಜ ಅರಸು ಸಬಲೀಕರಣದ ಸಂಕೇತವಾಗಿದ್ದು, ಮೋದಿ ವಿನಾಶದ ಸಂಕೇತ ಅಂತ ಪ್ರೊ.ಮಹೇಶ್​ಚಂದ್ರಗುರು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುವ ಪ್ರಯತ್ನ‌ ಪ್ರಜ್ಞಾವಂತರಿಂದಲೇ ನಡೆಯುತ್ತಿದ್ದು ನಿಜಕ್ಕೂ ವಿಷಾದನೀಯ.

1 ಕಾಮೆಂಟ್

  1. Thanks to the professor, finally some one has told the truth about it. Yes its true Brahmanism in the country has always projected hanuman as slave to Rama, as if rama is a superior master. This shows this right wing always want shudras to be as their slaves.

Comments are closed.