ರಾಮದಾಸ್​ರ ಟಿಕೇಟ್​ಗೆ ಪ್ರೇಮಕುಮಾರಿಯೇ ಅಡ್ಡಿ- ಆರ್​ಎಸ್​ಎಸ್​ ಕಚೇರಿಗೇ ನುಗ್ಗಿದ ಪ್ರೇಮಕುಮಾರಿ!

ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ರಾಮದಾಸ್​ ಭವಿಷ್ಯ ಅತಂತ್ರವಾಗುವ ಮುನ್ಸೂಚನೆ ದಟ್ಟವಾಗತೊಡಗಿದೆ.

ad


ಹೌದು ರಾಮದಾಸ್​ ಪ್ರೇಮಪ್ರಕರಣದ ಸಂತ್ರಸ್ತೆ ಪ್ರೇಮಕುಮಾರಿ ರಾಮದಾಸ್​ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ರಾಮದಾಸ ಎದುರು ಕಣಕ್ಕಿಳಿಯುವ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೈಸೂರಿನ ಕೆ.ಆರ್​​​.ಕ್ಷೇತ್ರದಿಂದ ಸ್ಪರ್ಧೆಗೆ ಪ್ರೇಮಕುಮಾರಿ ಸಜ್ಜಾಗಿದ್ದು, ಇದರ ಮೊದಲ ಹಂತವಾಗಿ ಸುತ್ತೂರುಶ್ರೀ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಲಿಂಗಾಯಿತ-ವೀರಶೈವ ಸಮುದಾಯಕ್ಕೆ ಸೇರಿರುವ ಪ್ರೇಮಕುಮಾರಿ ಜಾತಿಯನ್ನೇ ಟ್ರಂಪ್​ ಕಾರ್ಡ್​ ಮಾಡಿಕೊಂಡು ರಾಮದಾಸ್​ಗೆ ಸವಾಲ ಹಾಕಿದ್ದಾಳೆ. ಅಷ್ಟೇ ಅಲ್ಲದೇ ಕೆ.ಆರ್.ಕ್ಷೇತ್ರದಲ್ಲಿ 30-35 ಸಾವಿರದಷ್ಟಿರುವ ಲಿಂಗಾಯತ್​-ವೀರಶೈವ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಸುತ್ತೂರು ಮಠದ ಆಶಿರ್ವಾದ ಪಡೆದ್ರೆ ಜಯ ತಪ್ಪಿದ್ದಲ್ಲ ಅನ್ನೋ ನಂಬಿಕೆ ಇರೋದರಿಂದ ಪ್ರೇಮಕುಮಾರಿ ಸ್ವಾಮೀಜಿ ಆಶಿರ್ವಾದ ಪಡೆದಿದ್ದಾಳೆ.

ಸುತ್ತೂರು ಶ್ರೀಗಳ ಆಶಿರ್ವಾದ ಪಡೆದ ಪ್ರೇಮಾಕುಮಾರಿ, ಬಿಜೆಪಿಯಿಂದ ರಾಮದಾಸ್​ಗೆ ಟಿಕೇಟ್​ ಕನ್ಪರ್ಮ್​ ಆದರೇ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದಲ್ಲದೇ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡಿದ ರಾಮದಾಸ್ ಪ್ರೇಯಸಿ ಪ್ರೇಮಕುಮಾರಿ ಅಲ್ಲಿ ನನಗೆ ರಾಮದಾಸ್ ರಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಸಿಗಬೇಕು. ನಾನು ನಿಮ್ಮ ಸಹೋದರಿ. ನಾನು ರಾಮದಾಸ್ ವಿರುದ್ಧ ಸ್ಪರ್ಧೆ ಮಾಡುವೆ. ನಿಮ್ಮ ಬೆಂಬಲ ನನಗೆ ಕೊಡಿ ಅಂತಾ ಪ್ರೇಮಕುಮಾರಿ ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನು ಪ್ರೇಮಕುಮಾರಿ ದಿಢೀರ್ ಭೇಟಿಯಿಂದ ಆರೆಸ್ಸೆಸ್ ಕಚೇರಿಯಲ್ಲಿ ಕಕ್ಕಾಬಿಕ್ಕಿ ವಾತಾವರಣ ಸೃಷ್ಟಿಯಾಗಿತ್ತು.