ಸಾವಿನಲ್ಲಿ ಮಗನನ್ನು ಹಿಂಬಾಲಿಸಿದ ತಂದೆ- ಒಂದೇ ಚಿತೆಯಲ್ಲಿ ನಡಿತು ತಂದೆ-ಮಗನ ಅಂತ್ಯಸಂಸ್ಕಾರ!!

ತಂದೆ-ಮಕ್ಕಳ ಬಾಂಧವ್ಯ ಅಂದ್ರೆನೇ ಅದು ಅಕ್ಷರಗಳಿಗೆ ನಿಲುಕದ್ದು. ತಮ್ಮ ಕಣ್ಮುಂದೆ ಹುಟ್ಟಿ ಬೆಳೆದ ಮಕ್ಕಳಿಗೆ ಚಿಕ್ಕ ನೋವಾದರೂ ಹೆತ್ತವರು ಸಹಿಸುವುದಿಲ್ಲ.

ad

ಇನ್ನು ಮಕ್ಕಳು ತಮ್ಮ ಕಣ್ಣೇದುರೇ ಸಾವನ್ನಪ್ಪಿದರೇ ಹೆತ್ತವರ ಸ್ಥಿತಿ ಹೇಗಿರಬೇಡ. ಹೌದು ಇಲ್ಲೂ ಕೂಡ ಇಂತಹುದೇ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಮಗ ಸಾವನ್ನಪ್ಪಿದ ಸಂಗತಿ ತಿಳಿದ ತಂದೆಯೂ ಮಗನನ್ನು ಹಿಂಬಾಲಿಸಿದ್ದು, ಮಗನೊಂದಿಗೆ ಚಿತೆ ಏರಿದ್ದಾರೆ. ಮೈಸೂರಿನ ಬೆಳವಾಡಿ ಗ್ರಾಮದ ಪುಟ್ಟೇಗೌಡರ್​​ ಮಗ ಬೈರೇಗೌಡ್​​ ಕ್ಯಾನ್ಸರ್​ನಿಂದ ಬಳಲುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೈರೇಗೌಡ್​​ ಸಾವನ್ನಪ್ಪಿದ್ದಾನೆ. ಇದರಿಂದ ತಂದೆ ಪುಟ್ಟೇಗೌಡ್​ರು ಆಘಾತಕ್ಕೊಳಗಾಗಿದ್ದರು.

 

ಮಗನ ಶವವನ್ನು ಸಶ್ಮಾನಕ್ಕೆ ಕೊಂಡೊಯ್ಯುವ ವೇಳೆ ಪುಟ್ಟೇಗೌಡರಿಗೂ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲೇ ಪುಟ್ಟೇಗೌಡರು ನಿಧನರಾಗಿದ್ದಾರೆ. ಬಳಿಕ ಕುಟುಂಬಸ್ಥರು ಮಗನ ಶವವನ್ನು ಸಶ್ಮಾನದಲ್ಲಿರಿಸಿ ತಂದೆಗೂ ವಿಧಿ-ವಿಧಾನ ನೆರವೇರಿಸಿ ತಂದೆ-ಮಗನಿಗೆ ಒಂದೇ ಚಿತೆಯಲ್ಲಿ ಅಗ್ನಿಸ್ಪರ್ಶ ಮಾಡಿದ್ದಾರೆ. ಶಾಸಕ ಜಿ.ಟಿ.ದೇವೆಗೌಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ತಂದೆ ಮಗನನ್ನು ಒಂದೇ ದಿನ ಕಳೆದುಕೊಂಡ ಮನೆಯಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.