ಟಿಕೇಟ್​ ಸಿಗದಿದ್ದರೇ ಬಿಜೆಪಿ ಬರೋರು ಕಾಂಗ್ರೆಸ್ಸಿನವರು- ನಳಿನ್​​ ಕುಮಾರ್ ಕಟೀಲ್ ಟಾಂಗ್ !

ರಮಾನಾಥ್ ರೈಯವರು ಬಿಜೆಪಿಗರು ಸದ್ಯದಲ್ಲೇ ಕಾಂಗ್ರೆಸ್ ಸೇರ್ತಾರೆ ಅಂತ ಹೇಳಿರುವ ವಿಚಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ. ಹೌದು ಬಿಜೆಪಿಯವ್ರು ಕಾಂಗ್ರೆಸ್ ಗೆ ಸೇರ್ತರಾ ಅಂತ ಕಾದು ಕುಳಿತುಕೊಳ್ಳಿ ನೋಡೊಣ ಅಂತ ಸಂಸದರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಬಿಜೆಪಿಯಲ್ಲಿ ಯಾವತ್ತೂ ಭಿನ್ನಾಭಿಪ್ರಾಯ ಸ್ಪೋಟ ಆಗುವುದಿಲ್ಲ.

ಆಕಾಂಕ್ಷಿಯಾಗಿದ್ದವನು ಕೊನೆ ತನಕ ಬಿಜೆಪಿಯಲ್ಲಿ ಹೋರಾಟ ಮಾಡ್ತಾನೆ. ಸಿಗದೇ ಇದ್ದಾಗ ಟಿಕೆಟ್ ಸಿಕ್ಕ ಅಭ್ಯರ್ಥಿಯನ್ನ ಬೆಂಬಲಿಸಿ ಕೆಲಸ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಪಟ್ಟಿ ಘೋಷಣೆ ಆದ ಮೇಲೆ ಅಲ್ಲಿನವರು ಕೆಲವರು ನಮ್ಮಲ್ಲಿ ಬರ್ತಾರೆ. ನಮ್ಮ ಬಾಗಿಲು ತಟ್ಟೋ ಕಾಂಗ್ರೆಸ್ ನವರನ್ನ ನಮ್ಮೊಳಗೆ ತೆಗೋತೇವೆ.

ರಮಾನಾಥ್ ರೈಗೆ ಆಶ್ಚರ್ಯ ಆಗುವಷ್ಟು, ಸಿದ್ದರಾಮಯ್ಯರಿಗೆ ನಿದ್ದೆ ಬಾರದಷ್ಟು ದೊಡ್ಡ ಸುದ್ದಿ ದ.ಕ ಜಿಲ್ಲೆಯಲ್ಲಿ ಆಗುತ್ತದೆ ಅಂತ ಭವಿಷ್ಯ ನುಡಿದಿದ್ದಾರೆ. ಇನ್ನು ನಮ್ಮ ಎಲ್ಲಾ ಕ್ಷೇತ್ರಗಳಿಗೆ ನಾವು ಕೊಟ್ಟ ಹೆಸರುಗಳ ಆಧಾರದಲ್ಲಿ ಮತ್ತೆ ಸಮೀಕ್ಷೆಯಾಗುತ್ತಿದೆ. ಜನಾಭಿಪ್ರಾಯದ ಮುಖೇನ ಗೆಲುವಿನ ಅಭ್ಯರ್ಥಿಗೆ ಟಿಕೆಟ್ ಕೊಡುವ ಕೆಲಸವಾಗ್ತಿದೆ. ನಾನು ಪಕ್ಷದ ಕಾರ್ಯಕರ್ತನಾಗಿದ್ದು, ನಾನು ಪಕ್ಷದ ಬೆಂಬಲಿಗ. ಹೀಗಾಗಿ ಯಾರ ಪರವೂ ಬ್ಯಾಟಿಂಗ್ ಮಾಡಲ್ಲ, ಯಾರ ಟಿಕೆಟ್ ಕೂಡ ತಡೆ ಹಿಡಿಯಲ್ಲ. ಈ ಬಗ್ಗೆ ಎದ್ದಿರುವ ಸಂಶಯ ಕೇವಲ ಊಹಾಪೋಹಗಳಷ್ಟೇ. ಟಿಕೆಟ್ ಸಿಗದೇ ಇದ್ದಾಗ ಆಕ್ರೋಶಗೊಂಡು ಬೈಯ್ಯುವುದು ಸಹಜ. ಆದ್ರೆ ಬೈದರೂ ಮತ್ತೆ ನಾವು ಒಂದಾಗಿ ಕೆಲಸ ಮಾಡ್ತೇವೆ ಎಂದರು. ಇನ್ನು ರಮಾನಾಥ್ ರೈ, ಖಾದರ್, ಅಭಯರ ಬೆಂಬಲಿಗರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಬಿಜೆಪಿಗೆ ತೆಗೆದುಕೊಳ್ತೇನೆ. ಅಲ್ಲಿ ಅವರಿಗೆ ಟಿಕೆಟ್ ಕೊಡದೇ ಇದ್ರೆ ನಮ್ಮಲ್ಲಿ ತಗೆದುಕೊಳ್ಳುತ್ತೇವೆ.

ಆದ್ರೆ ಇಲ್ಲಿ ಟಿಕೆಟ್ ಕೊಡಲ್ಲ, ನಮ್ಮಲ್ಲಿ ಬರ್ತಾರೆ ಎಂದವರು ಇದೇ ವೇಳೆ ಹೇಳಿದ್ರು.

Avail Great Discounts on Amazon Today click here