ವಿದ್ವತ್​​ ಮೇಲೆ ನಳಪಾಡ್​ ಹಲ್ಲೆ ಪ್ರಕರಣ- ವಿಚಾರಣೆಗೆ ಹಾಜರಾದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​!

ವಿದ್ಚತ್ ಮೇಲೆ ಮಹಮ್ಮದ್ ಹ್ಯಾರಿಸ್ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೇಜರ್ ಟಿಸ್ಟ್ ಸಿಕ್ಕಿದೆ. ವಿದ್ವತ್​ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್​​ ಸಿಸಿಬಿ ವಿಚಾರಣೆಗೆ ಹಾಜರಾದ್ರು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬೋಸ್​ ವಾಪಸ್ಸಾಗಿದ್ದಾರೆ.

ad


ಹೌದು ವಿದ್ವತ್ ಮೇಲೆ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ಮಾಡುವಾಗ ಸಚಿವ ಹೆಚ್ ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಫರ್ಜಿ ಕೆಫೆಯಲ್ಲಿ ಇದ್ರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಸಚಿವರ ಪುತ್ರ ಇದ್ದದ್ದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸ್ರು ಕಳೆದ ವಾರ ನಡೆದ ಘಟನೆ ಬಗ್ಗೆ ಹೇಳಿಕೆ ನೀಡುವಂತೆ ನೋಟೀಸ್ ಜಾರಿ ಮಾಡಿದ್ರು.  ಈ ಹಿನ್ನಲೆ ಇಂದು ಬೆಳ್ಳಗ್ಗೆ ಸುನೀಲ್ ಬೋಸ್ ಸಿಸಿಬಿ ಪೊಲೀಸ್ರು ಮುಂದೆ ಹಾಜರಾಗಿದ್ರು. ತನಿಖಾಧಿಕಾರಿ ಅಶ್ವತ್ ಗೌಡ ಹಾಜರಾಗಿದ್ದ ಸುನೀಲ್ ನನಗೆ ವಿದ್ಚತ್ ಯಾರು ಅಂತ ಗೊತ್ತಿಲ್ಲ.

ಮಹಮ್ಮದ್ ಯಾರು ಅಂತ ಗೊತ್ತಿಲ್ಲ.ಫರ್ಜಿ ಕೆಫೆಯಲ್ಲಿ ಏನು ನಡೆಯಿತ್ತು ಅದರ ಬಗ್ಗೆ ಹೇಳಿಕೆ ಕೊಟ್ಟಿದ್ದೇನೆ. ಮುಂದೆ ಪೊಲೀಸ್ರು ಪ್ರಕರಣದ ಬಗ್ಗೆ ತನಿಖೆ ಮುಂದುವರೆಸುತ್ತಾರೆ ಅಂತ ಬಿಟಿವಿ ಹೇಳಿಕೆ ನೀಡಿ ಸಿಸಿಬಿ ಕಚೇರಿಯಿಂದ ಸುನೀಲ್ ಬೋಸ್ ತೆರಳಿದ್ರು. ಇನ್ನು ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ನಲಪಾಡ್ ಪರಪ್ಪನ ಜೈಲ್ಲಿನಲ್ಲೆ ದಿನಗಳು ಕಳೆಯುತ್ತಿದ್ದು. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಪ್ರಯತ್ನ ನಡೆಸುತ್ತಿದ್ದಾರೆ.