ಮಲ್ಲಿಕಾರ್ಜುನ ಖರ್ಗೆ ಅಖಾಡದಿಂದಲೇ ‘ಮೋದಿ’ ಕರುನಾಡ ಮತ ಬೇಟೆ…!

ಮಲ್ಲಿಕಾರ್ಜುನ ಖರ್ಗೆಯವರನ್ನು ಮಣಿಸಲು BJP ಯಲ್ಲಿ ಭರ್ಜರಿ ರಣತಂತ್ರ ಮಾಡಲಾಗಿದೆ. ಇಂದು ಕಲಬುರ್ಗಿಯಲ್ಲಿ ನರೇಂದ್ರ ಮೋದಿಯವರು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. . ಮಧ್ಯಾನ ರಾಜ್ಯದಲ್ಲಿ BJPಯ ಪ್ರಚಾರದ ಅಬ್ಬರಕ್ಕೆ ಸ್ವತಹ  ಮೋದಿಯವರೇ ಚಾಲನೆ ಕೊಡುತ್ತಿದ್ದಾರೆ. ಇದರ ಜೊತೆಯಲ್ಲೇ  BJP ಯಲ್ಲಿ ಕಾಂಗ್ರೆಸ್ MLA  ಡಾ. ಉಮೇಶ್ ಜಾದವ್ ಅವರನ್ನು ಸೆಳೆದು ಕಣಕ್ಕಿಳಿಸುವ ಮಾಸ್ಟರ್ ಪ್ಲಾನ್ ಮಾಡಿಕೊಳ್ಳಲಾಗಿದೆ.

ಈಗಾಗಲೇ ಕಾಂಗ್ರೆಸ್ಗೆ ರಾಜೀನಾಮೆ ನೀಡಿ BJP ಗೆ ಸೇರುವುದಾಗಿ ಮಾತನಾಡಿರುವ ಜಾದವ್  ಇಂದು ಮೋದಿ ಸಮುಖದಲ್ಲೇ BJP ಪಕ್ಷಕ್ಕೆ ಉಮೇಶ್ ಜಾದವ್ ಅವರು ಸೇರ್ಪಡೆಯಾಗುತ್ತಿದ್ದಾರೆ. ದಿನಾಂಕ 5/3ರ ಸಂಜೆ ಬೆಂಬಲಿಗರ ಸಭೆಯನ್ನು ಕರೆದು BJPಗೆ  ಸೇರುವುದಾಗಿ ತನ್ನ ನಿರ್ಧಾರವನ್ನು ಜಾದವ್ ಅವರು ತಿಳಿಸಿದ್ದಾರೆ. ಹಾಗಾಗಿಯೇ ನರೇಂದ್ರ ಮೋದಿಯವರ ಮಾಸ್ಟರ್ ಪ್ಲಾನ್  ‘ಶತಾಯ ಗತಾಯ ಮಲ್ಲಿಕಾರ್ಜುನ ಖರ್ಗೆ ಯವರನ್ನು ಮಣಿಸಲೇ ಬೇಕು ಎಂಬಂತೆ ಖರ್ಗೆ ಅಖಾಡದಿಂದಲೇ ಮೊದಲು ಮತ ಬೇಟೆಯನ್ನು ಶುರುಮಾಡಿದ್ದಾರೆ.