ಪ್ರಧಾನಿ ಮೋದಿ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ- ಅದೃಷ್ಟವಶಾತ್ ಅಪಾಯದಿಂದ ಜಶೋದಾಬೆನ್​ ಪಾರು!!

ರಾಜಸ್ಥಾನದ ಬರಾನ್ ನಿಂದ ಗುಜರಾತಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾಬೆನ್ ಅವರ ಕಾರು ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಮೋದಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಜರಾತ್ ನ ಬರಾನ್​ ಜಿಲ್ಲೆಯ ಕೊಟಾ ಎಂಬಲ್ಲಿಗೆ ಸಂಬಂಧಿಕರನ್ನು ಭೇಟಿ ಮಾಡಲು ಜಶೋದಾಬೆನ್​ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ. ಅಪಘಾತದಲ್ಲಿ ಜಶೋದಾಬೆನ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಇಲ್ಲಿನ ಚಿತ್ತೋರಗಢ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಜಶೋದಾಬೆನ್ ಅವರೊಂದಿಗಿದ್ದ ಸಂಬಂಧಿ ವಸಂತ್ ಬೆನ್ ಎಂಬುವವರು ಸಾವನ್ನಪ್ಪಿದ್ದಾರೆ. ಜಶೋದಾಬೆನ್​​ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಈ ಘಟನೆ ನಡೆದಿದ್ದು, ಕಾರಿನಲ್ಲಿ ಜಶೋದಾಬೆನ್​ ಸೇರಿ 7 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತದ ನಂತರ ಜಶೋದಾಬೆನ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಧಾನಿ ಪತ್ನಿ ಜಶೋಧಾಬೆನ್​ ಅವರು ತಮ್ಮ ಸಹೋದರ ಸಂಬಂಧಿ ಅಶೋಕ್​ ಮೋದಿಯೊಂದಿಗೆ ವಾಸಿಸುತ್ತಿದ್ದಾರೆ.