ನರೇಂದ್ರ ಮೋದಿ ಅವರಪ್ಪನಾಣೆ ಈ ಬಾರಿ ಪ್ರಧಾನಿ ಆಗಲ್ಲ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಲು ಹೊರಟಿದೆ, ಅನಂತ್ ಕುಮಾರ್ ಹೆಗಡೆ ಸಂವಿಧಾನವನ್ನೆ ಬದಲಾಯಿಸ್ತೇನೆ ಅಂತಾರೆ, ನಾನು ಪ್ರಧಾನಿಯಾಗಿದ್ರೆ ಇವರನ್ನೆಲ್ಲ ಜೈಲಿಗಟ್ತಿದ್ದೆ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಾರಿ ಬಿಜೆಪಿ ಎನೇ ತಿಪ್ಪರಲಾಗ ಹಾಕಿದ್ರೂ ಕೇಂದ್ರದಲ್ಲಿ ಸರ್ಕಾರ ರಚಿಸಲ್ಲ, ನರೆಂದ್ರ ಮೋದಿ ಅವನಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಸಿದ್ದರಾಮಯ್ಯ ಇಂದು ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.