ಫೈರ್ ಐಪಿಎಸ್ ಮೊದಲ ಮಹಿಳಾ ಡಿಜಿಪಿ ! ನೀಲಮಣಿ ರಾಜುಗೆ ಒಲಿದ ಪೊಲೀಸ್ ಮುಖ್ಯಸ್ಥೆ ಹುದ್ದೆ

ad


ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ರಾಜುರನ್ನು ಡಿಜಿಪಿಯನ್ನಾಗಿ ರಾಜ್ಯ ಸರಕಾರ ನೇಮಿಸಿ ರಾಜ್ಯ ಗೃಹ ಇಲಾಖೆಯಲ್ಲಿ ಹೊಸ ಇತಿಹಾಸ ಬರೆದಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಮೂವರು ಹಿರಿಯ ಮತ್ತು ಪ್ರಭಾವಿ ಐಪಿಎಸ್ ಅಧಿಕಾರಿಗಳು ಪೈಪೋಟಿ ನಡೆಸಿದ್ದರು. ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಎಸಿಬಿ ಚೀಫ್ ಎಂ ಎನ್ ರೆಡ್ಡಿ, ಅಗ್ನಿಶಾಮಕ ಇಲಾಖೆ ಡಿಜಿಪಿ ನೀಲಮಣಿರಾಜು ರೇಸ್ ನಲ್ಲಿ ಇದ್ದರು. ಮೈಸೂರು ಮೂಲದ ಕನ್ನಡಿಗ ಕಿಶೋರ್ ಚಂದ್ರ ನೇಮಕ ಬಹುತೇಕ ಖಚಿತವಾಗಿತ್ತು. ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 01 ರಿಂದ ಕನ್ನಡಿಗ ಐಪಿಎಸ್ ಅಧಿಕಾರಿ ಡಿಜಿಪಿಯಾಗಿ ಕಾರ್ಯಭಾರ ಮಾಡಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಸರಕಾರ ತನ್ನ ನಿರ್ಧಾರ ಬದಲಿಸಿ ನೀಲಮಣಿರಾಜುಗೆ ಮಣೆ ಹಾಕಿದೆ.

1983 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ನೀಲಮಣಿ ರಾಜು 23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿದ್ದರು. ಕಳೆದ ಬಾರಿಯೇ ಆರ್ ಕೆ ದತ್ತಾ ಜೊತೆ ಡಿಜಿಪಿ ಹುದ್ದೆಗೆ ಪೈಪೋಟಿ ನಡೆಸಿ ವಿಫಲವಾಗಿದ್ದರು. ನಂತರ ಅವರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿಯನ್ನಾಗಿ ನೇಮಿಸಲಾಗಿದೆ. ಫೈರ್ ಫೋರ್ಸ್ ನ ಫೈರ್ ಬಾಂಡ್ ಅಧಿಕಾರಿ ನೀಲಮಣಿ ರಾಜು ಇದೀಗ ರಾಜ್ಯದ ಮೊದಲ ಡಿಜಿಪಿಯಾಗಿ ನೇಮಕಗೊಂಡಿದ್ದಾರೆ.