ಎರಡನೇ ಮದುವೆಗೆ ಕಲ್ಯಾಣ ಮಂಟಪ ಕ್ಕೆ ಬಂದಾತ ನಾಪತ್ತೆಯಾಗಿದ್ದ್ಯಾಕೆ ಗೊತ್ತಾ?

ಆತ ವರ್ಷಗಳ ಹಿಂದೆ ಯುವತಿಯೊರ್ವಳನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೇ ಅದ್ಯಾವುದೋ ಕಾರಣಕ್ಕೆ ಮೊದಲನೇ ಹೆಂಡತಿ ಕೈಕೊಟ್ಟವನು ಮತ್ತೆ ಇಂದು ಮುಂಜಾನೆ ಎರಡನೇ ಕಲ್ಯಾಣಕ್ಕೆ ಅಣಿಯಾಗಿದ್ದ. ಈ ಮಾಹಿತಿ ತಿಳಿದ ಮೊದಲನೇ ಪತ್ನಿ ಮದುವೆಯಲ್ಲಿ ದಾಂಧಲೆ ಮಾಡಿದ್ದು ವರ ಕಂಗಾಲಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ad

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಗದ್ದುಗೆಮಠದಲ್ಲಿ ಘಟನೆ ನಡೆದಿದ್ದು, ಗುಡೇಮಾರನಹಳ್ಳಿಯ ನಿವಾಸಿ ರೇಣುಕಾಪ್ರಸಾದ್ ಎರಡನೇ ಮದುವೆಗೆ ಮುಂದಾಗಿದ್ದ ವ್ಯಕ್ತಿ. ಈತ 9 ವರ್ಷದ ಹಿಂದೆ ಯಮುನಾ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಯುವತಿ ಯಮುನಾ ಕೂಡ ಗುಡೇಮಾರನಹಳ್ಳಿಯ ನಿವಾಸಿಯಾಗಿದ್ದು ಮನೆಯವರ ವಿರೋಧದ ನಡುವೆ ಇಬ್ಬರು ಮದುವೆಯಾಗಿದ್ದರು. ನಂತರದಲ್ಲಿ ರೇಣುಕಾ ಪ್ರಸಾದ್ ನ ಮನೆಯವರು ಇವರಿಬ್ಬರ ಮದುವೆಗೆ ಅಡ್ಡಿ ಪಡಿಸಿ ಗಲಾಟೆ ಕೂಡ ನಡೆದಿತ್ತು. ಈ ವೇಳೆ ಮನಸ್ಥಾಪದಿಂದ ಯಮುನಾ ಮತ್ತು ರೇಣುಕಾಪ್ರಸಾದ್​ ಬೇರೆ-ಬೇರೆಯಾಗಿದ್ದರು.

ಇದೀಗ ಮೊದಲ ಪತ್ನಿಗೆ ಡಿವೋರ್ಸ್ ಕೂಡ ನೀಡದೇ ರೇಣುಕಾ ಪ್ರಸಾದ್ ಪೋಷಕರು ತಮ್ಮ ಮಗನಿಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದರು. ಈ ವೇಳೆ ನೊಂದ ಯುವತಿ ಅಖಿಲ ಭಾರತ ಕಾರ್ಮಿಕ ಕ್ರಿಯಾ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಸಹಾಯವನ್ನು ಪಡೆದು ಮದುವೆ ನಡೆಯುತಿದ್ದ ದೇವಾಲಯಕ್ಕೆ ತೆರಳಿ ನ್ಯಾಯಕ್ಕಾಗಿ ರಂಪಾಟ ನಡೆಸಿ ಮದುವೆಯನ್ನ ನಿಲ್ಲಿಸಿದ್ದಾರೆ.
ಮಾಧ್ಯಮಗಳು ವರದಿಗೆ ತೆರಳುತಿದ್ದಂತೆ ವರ ರೇಣುಕಾ ಪ್ರಸಾದ್ ಹಾಗೂ ಎರಡನೇ ಮದುವೆಗೆ ತಯಾರಿದ್ದ ಮದುಮಗಳು ಕ್ಷಣಾರ್ಧದಲ್ಲಿ ನಾಪತ್ತೆಯಾದರು. ನಂತರ ಘಟನಾ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.