ಗ್ರಾಮಸ್ಥರು ಬಸ್​ ಚಾಲಕರ ಕಾಲಿಗೆ ಬಿದ್ದಿದ್ಯಾಕೆ ನೀವೆ ನೋಡಿ!!

ನೆಲಮಂಗಲದ ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ಬಸ್​ಗಳು ಸಂಚರಿಸುತ್ತವೆ. ಆದರೇ ಯಾವುದೇ ಬಸ್​ಗಳು ನೆಲಮಂಗಲದ ಜನತೆಗೆ ಬಳಕೆಗೆ ಸಿಗುತ್ತಿರಲಿಲ್ಲ.

ad


ಇಲ್ಲಿ ಸಂಚರಿಸುವ ಬಸ್​ಗಳು ಸರ್ವಿಸ್ ರಸ್ತೆಯಲ್ಲಿ ಬರದೇ ಇರೋದರಿಂದ ಜನರು ಕಂಗಾಲಾಗಿದ್ದರು. ಇದರಿಂದ ಕಂಗೆಟ್ಟ ಜನರು ಇಂದು ಶಾಂತವಾಗಿ ಹಾಗೂ ವಿನೂತನವಾಗಿ ಪ್ರತಿಭಟನೆಗೆ ಮುಂಧಾಗಿದ್ದರು. ಸರ್ವಿಸ್​ ರಸ್ತೆಗಳಿಗೆ ಬಂದ ಬಸ್​​ಗಳನ್ನು ತಡೆದು ಬಸ್​​ ಚಾಲಕರಿಗೆ ಹಾಗೂ ನಿರ್ವಾಕರಿಗೆ ಹಾರ ಹಾಕೋದರ ಮೂಲಕ ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲ ಹಾರ ಹಾಕಿದ ಬಳಿಕ ಲಿಂಬೆಹಣ್ಣು ಕೊಟ್ಟು ಚಾಲಕರು-ನಿರ್ವಾಹಕರಿಗೆ ಕಾಲು ಮುಟ್ಟಿ ನಮಸ್ಕರಿಸಿದ ಗ್ರಾಮಸ್ಥರು ಬಸ್​ಗಳನ್ನು ನೆಲಮಂಗಲದಲ್ಲಿ ನಿಲ್ಲಿಸುವಂತೆ ಮನವಿ ಮಾಡಿದರು. ಧೀಡಿರ ಗ್ರಾಮಸ್ಥರ ಈ ಪ್ರತಿಭಟನೆಯಿಂದ ಕೆಎಸ್​ಆರ್​ಟಿಸಿ ಹಾಗೂ ಖಾಸಗಿ ಬಸ್​ ಚಾಲಕರು ಮುಜುಗರ ಎದುರಿಸಿದ್ದು, ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದರು.