ವಿಲ್ಹೀಂಗ್​ ಮೋಜಿಗೆ ಬಿತ್ತು ಸಖತ್ ಧರ್ಮದೇಟು!!

ಅವರು ಪ್ರತಿನಿತ್ಯ ಮೈನವಿರೇಳಿಸುವಂತೆ ವೀಲ್ಹಿಂಗ್​ ಮಾಡಿ ಸಂಭ್ರಮಿಸುತ್ತಿದ್ದರು. ಆದರೇ ಇವತ್ತು ಅವರ ಅದೃಷ್ಟ ಕೆಟ್ಟಿತ್ತು ಅನ್ಸುತ್ತೆ. ಹೀಗಾಗಿ ವೀಲ್ಹಿಂಗ್ ಮಾಡುತ್ತಿದ್ದ ಬೈಕ್​ ಕಾರಿಗೆ ಡಿಕ್ಕಿ ಹೊಡೆದಿದೆ.

ad


ಅದೃಷ್ಟವಶಾತ ಹೆಚ್ಚಿನ ಅನಾಹುತವಾಗಿಲ್ಲ. ಆದರೂ ಯುವಕರ ಈ ಅಪಾಯಕಾರಿ ಕೃತ್ಯಕ್ಕೆ ಕೆರಳಿದ ಸ್ಥಳೀಯರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದೇವಣ್ಣನ ಪಾಳ್ಯ ಬಳಿ ಇಬ್ಬರು ಯುವಕರು ವೀಲ್ಹಿಂಗ್ ಮಾಡುತ್ತಿದ್ದರು. ಈ ವೇಳೆ ಆಯತಪ್ಪಿ ವೇಳೆ ಒಂದು ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೆರಳಿದ ಸ್ಥಳೀಯ ಮಹಿಳೆಯರು ಸೇರಿದಂತೆ ಜನರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಹೆಲ್ಮೆಟ್​​ ಸೇರಿದಂತೆ ಸಿಕ್ಕ-ಸಿಕ್ಕ ವಸ್ತುಗಳಿಂದ ಥಳಿಸಿ ಹಣ್ಣುಗಾಯಿ-ನೀರುಗಾಯಿ ಮಾಡಿದ್ದಾರೆ. ಇನ್ನು ಈ ಯುವಕರನ್ನು ಹಿಡಿದು ಥಳಿಸಿದ ಪರಿಣಾಮ ತುಮಕೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಯುವಕರನ್ನು ಸ್ಥಳೀಯರು ಹಿಗ್ಗಾ-ಮುಗ್ಗಾ ಥಳಿಸಿದ್ದರಿಂದ ಅವರು ಅಸ್ವಸ್ಥರಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ನೆಲಮಂಗಲ ಪೊಲೀಸರು ಆರೋಪಿತ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.