ಶ್ರೀಲಂಕಾ ಸರಣಿ ಬ್ಲಾಸ್ಟ್​​ನಲ್ಲಿ ನೆಲಮಂಗಲ ಇಬ್ಬರ ಸಾವು!! 5 ಜನ ಕನ್ನಡಿಗರರು ನಾಪತ್ತೆ!!

ಶ್ರೀಲಂಕಾದಲ್ಲಿ ಚರ್ಚ್‌ ಹಾಗೂ ಹೋಟೆಲ್‌ಗಳಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವ ಬೆನ್ನಲ್ಲೇ ಇದೀಗಾ ಶ್ರೀಲಂಕಾ ಸರಣಿ ಬ್ಲಾಸ್ಟ್​​ನಲ್ಲಿ ಕನ್ನಡಿಗರು ದುರ್ಮರಣ ಹೊಂದಿದ್ದಾರೆ ಎಂಬ ಮಾಹಿತಿ ದೊರಕಿದೆ.  ಬಾಂಬ್​​ ದಾಳಿಗೆ ನೆಲಮಂಗಲ ನಿವಾಸಿಗಳಾದ ಹನುಮಂತರಾಯಪ್ಪ, ರಂಗಪ್ಪ ಸಾವನ್ನಪ್ಪಿದ್ದಾರೆ.

ad

ಇನ್ನೂ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ 6  ಮಂದಿ ಕನ್ನಡಿಗರು ಕೂಡ ನಾಪತ್ತೆಯಾಗಿದ್ದಾರೆ.  ಶಿವಕುಮಾರ್​​​, ಲಕ್ಷ್ಮಿನಾರಾಯಣಮಾರೇಗೌಡ, ಹನುಮಂತರಾಯಪ್ಪ, ಪುಟ್ಟರಾಜು, ರಮೇಶ್ ನಾಪತ್ತೆಯಾದವರು. ಇದರಲ್ಲಿ ಇಬ್ಬರು ಸಾವನ್ನಪ್ಪಿರೋದನ್ನು  ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.  ಇತರರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನದಂದೇ 3 ಚರ್ಚ್​​ಗಳು ​, 3 ಹೋಟೆಲ್​ಗಳು​ ಹಾಗೂ ಸಾರ್ವಜನಿಕ ಸ್ಥಳಗಳೂ ಸೇರಿ ಒಟ್ಟು 8 ಕಡೆಗಳಲ್ಲಿ ಭಯೋತ್ಪಾದಕರು ಬಾಂಬ್​ ಬ್ಲಾಸ್ಟ್ ನಡೆಸಿದ್ದಾರೆ. ಆತ್ಮಾಹುತಿ ಬಾಂಬ್​​​​ ಸ್ಫೋಟದಲ್ಲಿ ಮೂವರು ಭಾರತೀಯರು, 27 ಮಂದಿ ವಿದೇಶೀಯರು ಸೇರಿದಂತೆ ಈವರೆಗೆ 215 ಮಂದಿ ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಭಾರತ, ಬ್ರಿಟಿಷ್, ಡಚ್‌ ಮತ್ತು ಅಮೆರಿಕನ್ ಪ್ರಜೆಗಳೂ ಸೇರಿದ್ದಾರೆ. ಇನ್ನು ಬಾಂಬ್​ ಬ್ಲಾಸ್ಟ್​ನಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರು ಸಹ ಮೃತಪಟ್ಟಿದ್ದಾರೆ.ಘಟನೆಗೆ ಸಂಬಂಧಿಸಿದಂತೆ 13 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.ಘಟನೆ ಹಿಂದೆ ತಾವೀದ್​ ಜಮಾತ್​ ಉಗ್ರ ಸಂಘಟನೆಯ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ.

ಇನ್ನು ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ ಉಗ್ರ ಚರ್ಚ್ ​ಒಳಗೆ ನುಗ್ಗಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭಾರೀ ಬ್ಯಾಗ್​​ನೊಂದಿಗೆ ಚರ್ಚ್​ ಒಳನುಗ್ಗಿದ ಸೂಸೈಡ್​ ಬಾಂಬರ್​​, ಚರ್ಚ್​ನಲ್ಲಿದ್ದ ಜನರ ಮಧ್ಯೆ ನಿಂತು ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದಾನೆ.