ಶಿವ ಶಿವ !! ಲಿಂಗದ ಮೇಲೆ ಕಾಲಿಟ್ಟು ಸ್ವಾಮೀಜಿ ಪಾದ ಪೂಜೆ !!

ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಸ್ವಾಮೀಜಿಯೊಬ್ಬರು ಶಿವಲಿಂಗದ ಮೇಲೆ ಕಾಲಿಟ್ಟು ಪಾದ ಪೂಜೆ ಮಾಡಿಸಿಕೊಂಡಿದ್ದಾರೆ.

ಕಲಬುರ್ಗಿ ಜಿಲ್ಲಾ ಆಳಂದ ತಾಲೂಕಿನ ನಿಂಬಾಳ ಗ್ರಾಮದ ಜಡೆಶಾಂತಲಿಂಗೇಶ್ವರ ಸ್ವಾಮೀಜಿ ಈ ರೀತಿ ವಿಚಿತ್ರ ಪಾದ ಪೂಜೆ ಮಾಡಿಸಿಕೊಂಡಿದ್ದಾರೆ.

ಮೌನಸ್ವಾಮಿ ಅಂತಲೇ ಕರೆಸಿಕೊಳ್ಳುವ ಈ ಸ್ವಾಮೀಜಿ ನೆಲಮಂಗಲ ಮಹಿಮೆರಂಗನ ಬೆಟ್ಟದ ಬಳಿ ಸ್ವಾಮೀಜಿ ನೂತನ ಮಠ ಸ್ಥಾಪನೆ ಮಾಡಿದ್ದಾರೆ. ಸದ್ಭಾವನಾ ಅಂತಾ ಹೆಸರಿಟ್ಟು ಸುಮಾರು ಎರಡು ಎಕರೆ ಪ್ರದೇಶದಲ್ಲಿ ಮಠ ಆರಂಭಿಸಲಾಗ್ತಿದೆ. ಮಠದ ಆವರಣದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಉದ್ದೇಶದಿಂದ ನಡೆದ ಪೂಜೆ ವೇಳೆ ಲಿಂಗದ ಮೇಲೆ ಕಾಲಿಟ್ಟು ಸ್ವಾಮೀಜಿ ಪೂಜೆ ಮಾಡಿಸಿಕೊಂಡಿದ್ದಾರೆ. ಇದು ಸುತ್ತಮುತ್ತಲ ಗ್ರಾಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾದ ಕೆಲವು ಮುಖಂಡರು ತಹಶೀಲ್ದಾರ್​​ಗೆ ಈ ಬಗ್ಗೆ ದೂರನ್ನೂ ನೀಡಿದ್ದಾರೆ.

ಈ ಸ್ವಾಮೀಜಿ ನಿಂಬಾಳ ಗ್ರಾಮವನ್ನು ಮದ್ಯಮುಕ್ತ ಗ್ರಾಮ ಮಾಡಲು ಹೋರಾಡಿದ್ದರು. ಜನ ಕುಡಿಯೋದು ನಿಲ್ಲಿಸೋವರೆಗೂ ಗ್ರಾಮಕ್ಕೆ ವಾಪಸ್​ ಬರಲ್ಲ ಎಂದಿದ್ದರು. ಇಂಥಾ ಚಿಂತನೆಯ ಸ್ವಾಮೀಜಿ ಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿರೋದು ಭಾರೀ ಚರ್ಚೆಗೂ ಕಾರಣವಾಗಿದೆ.