126 ಗಂಟೆಗಳ ಕಾಲ ಸತತ ನೃತ್ಯ! ಯುವತಿ ನೃತ್ಯಕ್ಕೆ ಸಿಕ್ಕ ಉಡುಗೊರೆ ಏನು ಗೊತ್ತಾ?!

ಅಬ್ಬಬ್ಬಾ ಅಂದ್ರೆ ಒಂದೆರಡು ಗಂಟೆಗಳ ಕಾಲ ಡ್ಯಾನ್ಸ್ ಮಾಡಬಹುದು. ಆದರೆ ಇಲ್ಲೊಬ್ಬಳು ಹೆಣ್ಣುಮಗಳು 126 ಗಂಟೆಗಳ ಕಾಲ ಡ್ಯಾನ್ಸ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ನೇಪಾಳದ 18 ವರ್ಷದ ಯುವತಿ ಬಂಧನಾ ಹೀಗೆ ಸಾಧನೆ ಮಾಡಿದ ಪ್ರತಿಭಾವಂತೆ.

ad

 

ಚಿಕ್ಕಂದಿನಿಂದಲೂ ಡ್ಯಾನ್ಸ್​ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಬಂಧನಾ ಡ್ಯಾನ್ಸ್​ ಕಲಿಕೆಯಲ್ಲಿ ತೊಡಗಿಕೊಂಡಿದ್ದರು. ಅದನ್ನು ಸಾಧನೆಗಾಗಿ ಬಳಸಿಕೊಂಡ ಬಂಧನಾ, 126 ತಾಸುಗಳ ಕಾಲ ಸತತ ಡ್ಯಾನ್ಸ್ ಮಾಡುವ ಮೂಲಕ ವಿಶ್ವವೇ ತನ್ನನ್ನ ತಿರುಗಿನೋಡುವಂತೆ ಮಾಡಿದ್ದಾರೆ.

ಈ ಹಿಂದೆ 2011ರಲ್ಲಿ ಭಾರತದ ಕಾಳಮಂಡಲಂ ಹೇಮಲತಾ ಎಂಬವರು ಸತತ 123 ಗಂಟೆ 15 ನಿಮಿಷಗಳ ಕಾಲ ಡ್ಯಾನ್ಸ್​ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ನೇಪಾಳದ 18 ವರ್ಷದ ಯುವತಿ ಬಂಧನಾ ಮುರಿದಿದ್ದು, 126 ಗಂಟೆಗಳ ಕಾಲ ಡ್ಯಾನ್ಸ್​ ಮಾಡೋ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ಸ್​​ನಲ್ಲಿದ್ದ ಭಾರತೀಯ ಯುವತಿಯ ಹೆಸರನ್ನು  ಬದಲಾಯಿಸಿ ನೇಪಾಳದ ಬಂಧನಾ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.

ಈ ಯುವತಿಯ ಸಾಧನೆಯನ್ನು ಮೆಚ್ಚಿ ನೇಪಾಳ ಪ್ರಧಾನಮಂತ್ರಿ ಕೆಪಿ ಶರ್ಮಾ ಓಲಿ ಕಠ್ಮಂಡುವಿನ ತಮ್ಮ ಕಚೇರಿಯಲ್ಲಿ ಕಾರ್ಯಕ್ರಮ ಏರ್ಪಡಿಸಿ ಬಂಧನಾಗೆ ಸನ್ಮಾನಮಾಡಿದ್ದಾರೆ. ಈ ವೇಳೆ ಮಾತನಾಡಿದ ಧನಕೂಟ ನಿವಾಸಿಯಾದ ಬಂಧನಾ ಕಳೆದ ಶುಕ್ರವಾರವಷ್ಟೇ ಗಿನ್ನಿಸ್ ರೆಕಾರ್ಡ್ಸ್​ನವರು ನನ್ನ ದಾಖಲೆ ನಿರ್ಮಾಣದ ಬಗ್ಗೆ ದೃಢಪಡಿಸಿದ್ದಾರೆ ಎಂದು ತಿಳಿಸಿದರು.