ಇನ್ನು ಇಸ್ತ್ರಿ ಮಾಡುವುದು ಬಲು ಸುಲಭ. ಅವಿಷ್ಕಾರಗೊಂಡಿತು ಹೊಸಾ ಯಂತ್ರ

ಸೀರೆ, ಪಂಚೆ ಹಾಗೂ ಧೋತಿಯಂತ ಉದ್ದನೆಯ ವಸ್ತ್ರಗಳನ್ನು ಇನ್ನೂ ಐರೆನ್ (ಇಸ್ತ್ರೀ) ಮಾಡುಲು ಕಷ್ಟ ಪಡಬೇಕಿಲ್ಲ. ವಿದ್ಯುತ್ ಚಾಲಿತ ಯಂತ್ರಕ್ಕೆ ಸೀರೆ ಹಾಗೂ ಪಂಚೆ ಅಳವಡಿಸಿದರೆ ಸಾಕು.ಹದಿನೈದು ನಿಮಿಷಗಳಲ್ಲಿ ಬಟ್ಟೆಯನ್ನ ನೀಟಾಗಿ ಐರೆನ್ ಮಾಡುವುದಲ್ಲದೇ ಅಪ್ಪಟವಾಗಿ ಮಡಚಿಕೊಳ್ಳುತ್ತೆ.  ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಡಿಕಿಹಾಳ ಗ್ರಾಮದ ಅಜೇಯ ರಾಮಚಂದ್ರ ಮಾನೆ ಈ ಯುವಕ ಸ್ವಯಂ ಚಾಲಿತ ಐರೆನ್ ಮಾಡುವ ಯಂತ್ರಯೊಂದನ್ನು ಸಿದ್ದಪಡಿಸಿ ಐರೆನ್ ಮಾಡುವ ಕೇಲಸವನ್ನು ಸುಲಭವನ್ನಾಗಿಸಿದ್ದಾನೆ.

ad


 

ಇನ್ನು ಮೆಕ್ಯಾನಿಕಲ್ (ಐಟಿಐ) ಶಿಕ್ಷಣ ವ್ಯಾಸಂಗ ಮಾಡಿದ ಇತ ಬಾಲ್ಯದಿಂದಲೂ ವೈಜ್ನಾನಿಕ ಸಂಶೋಧನೆಯತ್ತ ಆಸಕ್ತಿ ಹೊಂದಿದ ಈತ ಶಿಕ್ಷಣ ಹಂತದಲ್ಲೂ ಬಿಡುವಿನ ಸಮಯದಲ್ಲಿ ಹೊಸ ಹೊಸ ತಾಂತ್ರಿಕ ಆವಿಷ್ಕಾರದಲ್ಲಿಯೇ ಮಗ್ನನಾಗಿರುತ್ತಿದ್ದ. ಅಜೇಯ ತನ್ನ ಕೇಲಸದ ಬಿಡುವಿನ ಸಮಯದಲ್ಲಿ ನಿರಂತರ ನಾಲ್ಕು ತಿಂಗಳು ಕಾಲ ಪ್ರಯೋಗಮಾಡಿ ಈ ಯಂತ್ರವನ್ನು ಸುಮಾರು ಆರು ಸಾವಿರ ರೂಪಾಯಿ ಹಣವನ್ನು ಖರ್ಚುಮಾಡಿ ಈ ವಿದ್ಯುತ್ ಚಾಲಿತ್ ಯಂತ್ರದಿಂದ ಕೇವಲ ಹದಿನೈದು ನಿಮಿಷದಲ್ಲಿ ಒಂದು ಸೀರೆ ಅಥವಾ ಪಂಚೆಯನ್ನು ಐರನ್ ಮಾಡಿ ನೀಟಾಗಿ ಮಡಚಿಕೊಳ್ಳುವ ಸ್ವಯಂ ಚಾಲಿತ್ ಐರೆನ್ ಮಾಡುವ ಯಂತ್ರವನ್ನು ಸಿದ್ದಪಡಿಸಿದ್ದಾನೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.