ನಿಖಿಲ್ ಎಲ್ಲಿದ್ದೀಯಪ್ಪಾ ಸಿನಿಮಾ ಬರ್ತಿದ್ಯಾ? ಎಲ್ಲಿದ್ದಿಯಪ್ಪಾ ಫಿಲ್ಂ ಟೀಂ ಹೇಳ್ತಿರೋದೇನು? ಇಲ್ಲಿದೆ ಸಿನಿಮಾದ ಎಕ್ಸಕ್ಲೂಸಿವ್ ಡಿಟೇಲ್ಸ್​​!!

ಲೋಕಸಭೆ ಚುಣಾವಣೆ ವೇಳೆ ಮಂಡ್ಯದಿಂದ ಹಿಡಿದು ಫಾರಿನ್ ಕಂಟ್ರಿಯಲ್ಲೂ ಸೌಂಡ್ ಮಾಡಿದ್ದ ಡೈಲಾಗ್​ ನಿಖಿಲ್​ ಎಲ್ಲಿದ್ದೀಯಪ್ಪಾ? ಈ ಟೈಟಲ್​ಗಾಗಿ ಹಲವು ನಿರ್ಮಾಪಕರು ಚಲನಚಿತ್ರ ಮಂಡಳಿ ಮೆಟ್ಟಿಲೇರಿದ್ದು ನಿಮಗೆ ಗೊತ್ತೇ ಇದೆ. ಆದರೆ ಈಗ ಬರ್ತಿರೋ ಮಾಹಿತಿ ಪ್ರಕಾರ ನಿಖಿಲ್​ ಎಲ್ಲಿದ್ದೀಯಪ್ಪಾ ಟೈಟಲ್​​ನಲ್ಲಿ ಯಾವುದೇ ಸಿನಿಮಾ ಆಗ್ತಿಲ್ಲ. ಆದರೆ ಎಲ್ಲಿದ್ದಿಯಪ್ಪಾ ಅನ್ನೋ ಟೈಟಲ್​ ಮೇಲೆ ಸಿನಿಮಾ ಆಗ್ತಿದ್ದು, ಈ ಚಿತ್ರದ ಫುಲ್​ ಡಿಟೇಲ್ಸ್ ಇಲ್ಲಿದೆ ನೋಡಿ.

ad

ಲೋಕಸಭೆ ಅಖಾಡದಲ್ಲಿ ವಾಕ್ ಸಮರದ ಜೊತೆ ಜೊತೆ ಮಾರ್ಧನಿಸಿದ ಒಂದೇ ಒಂದು ಡೈಲಾಂಗ್ ಅಂದ್ರೆ ನಿಖಿಲ್ ಎಲ್ಲಿದ್ದಿಯಪ್ಪಾ. ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಸಿನೇಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ನಡೆಸಿದ ಸಂಭಾಷಣೆಯನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು.

ಜೆಡಿಎಸ್ ಮತ್ತು ಕುಮಾರಸ್ವಾಮಿ ವಿರೋಧಿಗಳಂತೂ ನಿಖಿಲ್ ಕುಮಾರಸ್ವಾಮಿಯ ವಿರುದ್ಧದ ಸಾಮಾಜಿಕ ಜಾಲತಾಣ ಕ್ಯಾಂಪೇನ್ ಗೆ ಇದನ್ನು ಯಥೇಚ್ಚವಾಗಿ ಬಳಸಿಕೊಂಡಿದ್ದವು. ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋ ಡೈಲಾಗ್ ಫೇಮಸ್​ ಆಗ್ತಿದ್ದಂತೆ ಇದನ್ನೇ ಟೈಟಲ್​ ಆಗಿಟ್ಟುಕೊಂಡು ಸಿನಿಮಾ ಮಾಡಿದ್ರೆ ಹೇಗೆ ಅಂತಾ ಅದೆಷ್ಟೋ ನಿರ್ಮಾಪಕರು ನಾ ಮುಂದು , ತಾ ಮುಂದು ಅಂತಾ ಕಾಂಪಿಟೇಷನ್​ಗೆ ಇಳಿದು ಬಿಟ್ಟಿದ್ರು. ವಾಣಿಜ್ಯ ಚಲನಚಿತ್ರ ಮಂಡಳಿ ಮುಂದೆ ಟೈಟಲ್​ಗಾಗಿ ಕ್ಯೂ ನಿಂತು ಬಿಟ್ಟಿದ್ರು.

ಹೀಗೆ ಪೈಪೋಟಿ ನಡುವೆ ನಿಖಿಲ್ ಕುಮಾರಸ್ವಾಮಿ ಖುದ್ದು ನಾನೇ ಈ ಟೈಟಲ್ ಇಟ್ಕೊಂಡು ಸಿನಿಮಾ ಮಾಡ್ತೀನಿ ಅಂತಾ ಹೇಳಿಕೊಂಡಿದ್ರು. ಮಂಡ್ಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಿಖಿಲ್, ಈ ಟೈಟಲ್ ಯಾರಿಗೂ ಕೊಡಬೇಡಿ ಎಂದು ಖುದ್ದು ನಾನೇ ಹೇಳಿದ್ದೇನೆ. ನಿಖಿಲ್ ಎಲ್ಲಿದ್ದಿಯಪ್ಪಾ ಸಿನಿಮಾದಲ್ಲಿ ನಾನೇ ಹೀರೋ ಅಂದಿದ್ದಾರೆ. ಸಚಿವ ಸಿ.ಎಸ್.ಪುಟ್ಟರಾಜು ನಿಖಿಲ್ ಮಾತಿಗೆ ದನಿಗೂಡಿಸಿ ನಾನೇ ನಿರ್ಮಾಪಕನಾಗುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ರು.

ನಿಖಿಲ್​ ನಾನೇ ಈ ಟೈಟಲ್ ಇಟ್ಕೊಂಡು ಸಿನಿಮಾ ಮಾಡ್ತೀನಿ ಅಂತಾ ಹೇಳಿಕೆ ಬೆನ್ನಲ್ಲೇ ನಿರ್ಮಾಪಕ ಗಣೇಶ್ ಎಲ್ಲಿದ್ದಿಯಪ್ಪ ಟೈಟಲ್​​ನಲ್ಲಿ ನಾನೇ ಚಿತ್ರ ಮಾಡ್ತಿದ್ದೇನೆ. ಈ ಟೈಟಲ್ ಹಿಂದೆ, ಮುಂದೆ ಸೇರಿಸಿ ಯಾರಿಗೂ ಟೈಟಲ್ ಕೊಡಬಾರದು ಅಂತಾ ಫಿಲ್ಮಂ ಛೇಂಬರ್​ಗೆ ಮನವಿ ಮಾಡ್ಕೊಂಡ್ರು. ಅಲ್ಲದೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಎಲ್ಲಿದ್ದೀಯಪ್ಪ ಟೈಟಲ್ ರಿಜಿಸ್ಟರ್​ ಮಾಡಿಸಿದ್ದನ್ನು ಬಹರಂಗಪಡಿಸಿದ್ರು.

ಹೀಗಾಗಿ ನಿರ್ಮಾಪಕ ಗಣೇಶ್ ಫಿಲ್ಮಂ ಛೇಂಬರ್​ನಲ್ಲಿ​ ಟೈಟಲ್ ರಿಜಿಸ್ಟಾರ್ ಮಾಡಿಸಿರೋದು ಪಕ್ಕಾ ಆಗಿದೆ. ಆದ್ರೆ ಸಿನಿಮಾದ ಕಥೆಗೆ ಯಾವುದೇ ಪೊಲಿಟಿಕಲ್ ಟಚ್ ಇರೋದಿಲ್ಲ, ಸ್ಟಾರ್ ನಟರನ್ನೇ ಚಿತ್ರಕ್ಕೆ ಕರೆದುಕೊಂಡು ಬರ್ತಿನಿ. ಆಂಧ್ರದಿಂದ ಡೈರೆಕ್ಟರ್ ಕರೆದುಕೊಂಡು ಬತ್ತೀನೀ ಅಂತಿದ್ದಾರೆ ಎಲ್ಲಿದ್ದಿಯಪ್ಪಾ ಚಿತ್ರದ ನಿರ್ಮಾಪಕರು.

ದೊಡ್ಡ ಬಜೆಟ್ ಸಿನಿಮಾ, ಸ್ಟಾರ್​ ಹಿರೋ ಸಿನಿಮಾ ಅಂತಾ ನಿರ್ಮಾಪಕರೇನು ಹೇಳ್ತಿದ್ದಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದು ಸಿನಿಮಾ ಸೆಟ್ಟೇರಿದಾಗ್ಲೇ ಗೊತ್ತಾಗೋದು. ಯಾರು ಡೈರೆಕ್ಟರ್..? ಯಾರು ಹಿರೋ…? ಹೀಗೆ ಹಲವು ಪ್ರಶ್ನೆಗೆ ಉತ್ತರ ಸಿಗ್ಬೇಕು ಅಂದ್ರೆ ಅಲ್ಲಿವರೆಗೂ ವೇಟ್ ಮಾಡ್ಲೇಬೇಕು.