Nine Thousand Student Participated in Yoga near Amba Vilas Palace | ಮೈಸೂರಿನಲ್ಲಿ ಯೋಗ ಚೈನ್​ ಗಿನ್ನಿಸ್​ ದಾಖಲೆ ವೇಳೆ ಯಡವಟ್ ದಾಖಲೆ ಪ್ರದರ್ಶನದ ವೇಳೆ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

0
15

ಮೈಸೂರಿನಲ್ಲಿ ಯೋಗ ಚೈನ್​ ಗಿನ್ನಿಸ್​ ದಾಖಲೆ ವೇಳೆ ಯಡವಟ್
ದಾಖಲೆ ಪ್ರದರ್ಶನದ ವೇಳೆ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಗಿನ್ನಿಸ್ ದಾಖಲೆ ಯತ್ನ
ಏಕ ಕಾಲಕ್ಕೆ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗ ಚೈನ್
ಯೋಗ ಸರಪಳಿ ದಾಖಲೆಗಾಗಿ ಬೆಳಿಗ್ಗೆಯೇ ಬಂದಿದ್ದ ವಿದ್ಯಾರ್ಥಿಗಳು
ಕಾರ್ಯಕ್ರಮ ತಡವಾದ ಕಾರಣ ಕುಸಿದುಬಿದ್ದ ಇಬ್ಬರು ವಿದ್ಯಾರ್ಥಿಗಳು
ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿ ಯೋಗಾಸನ ಚೈನ್​​ ಮುಂದುವರಿಕೆ

ಯೋಗ ದಾಖಲೆ ವೇಳೆ ಅಸ್ವಸ್ಥ
========

ನಾಡಿದ್ದು ಯೋಗ ದಿನಾಚಾರಣೆ ಅಂಗವಾಗಿ ಮೈಸೂರಿನಲ್ಲಿ ಬೃಹತ್ ಯೋಗ ಪ್ರದರ್ಶನ ನಡೀತಾ ಇದೆ. ಈ ಮೂಲಕ ಗಿನ್ನಿಸ್ ದಾಖಲೆ ಬರೆಯಲು ಮೈಸೂರು ಅರಮನೆ ಮೈದಾನ ಸಜ್ಜಾಗಿದೆ. ಮೈಸೂರಿನ ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಲಾಂಗೆಸ್ಟ್ ಯೋಗ ಚೈನ್​​ನ್ನು ನಿರ್ಮಿಸಲಾಗಿದೆ. ಏಕಕಾಲದಲ್ಲಿ 9 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ.
=======
ಇನ್ನು ಮೈದಾನದಲ್ಲಿ ನಡೆಯುವ ಯೋಗಾದಲ್ಲಿ ವಿದ್ಯಾರ್ಥಿಗಳಿಂದ ವೀರಭದ್ರಾಸನ, ತ್ರಿಕೋನಾಸನ, ಪ್ರೇರಿತ ಪಡೋತ್ತಾಸನ ಪ್ರದರ್ಶನ ಮಾಡಲು ತಯಾರಿ ನಡೆಸಲಾಗಿದೆ. ಈ ಯೋಗ ಸರಪಳಿಯಿಂದ ಯೋಗಪಟುಗಳು ರೋಮಾಂಚನಗೊಂಡಿದ್ದಾರೆ. ಬೆಳಿಗ್ಗೆಯಿಂದಲೇ ಯೋಗ ಮಾಡಲು ವಿದ್ಯಾರ್ಥಿಗಳು ಆಗಮಿಸಿತ್ತಿದ್ದಾರೆ.
————
ಯೋಗಾ ತಾಲೀಮಿಗೆ ತಡವಾದ ಹಿನ್ನೆಲೆ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ತರಾಗಿದ್ದಾರೆ. ಇದ್ರಿಂದ ತಕ್ಷಣ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.

LEAVE A REPLY

Please enter your comment!
Please enter your name here