ಕ್ಯಾಬಿನೆಟ್ ಒಕ್ಕಲಿಗರ ಒಗ್ಗಟ್ಟಿಗೆ ನಿರ್ಮಲಾನಂದ ಶ್ರೀಗಳ ಸಾರಥ್ಯ !! ರಾಜಗುರುಗಳ ಧರ್ಮ ಪಾಲಿಸಿದ ಆದಿಚುಂಚನಗಿರಿ ಮಠ !!

ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಕ್ಕಲಿಗ ಪೈಪೋಟಿಯ ಹಿನ್ನಲೆಯಲ್ಲಿ ಆದಿಚುಂಚನಗಿರಿ ನಿರ್ಮಲಾನಂದ ನಾಥ ಸ್ವಾಮೀಜಿ ರಾಜಕೀಯ ಮಧ್ಯಪ್ರವೇಶ ಮಾಡಿದ್ದಾರೆ. ರಾಜಕೀಯ ವಿಚಾರದಲ್ಲಿ ಹಸ್ತಕ್ಷೇಪ ಮಾಡದ ನಿರ್ಮಲಾನಂದನಾಥ ಸ್ವಾಮೀಜಿ ಅನಿವಾರ್ಯವಾಗಿ ಸಮುದಾಯದ ಒಗ್ಗಟ್ಟು ಕಾಪಾಡುವ ಹಿನ್ನಲೆಯಲ್ಲಿ ಮಧ್ಯಪ್ರವೇಶ ಮಾಡಿ ಯಶಸ್ವಿಯಾಗಿದ್ದಾರೆ.

ಮೈತ್ರಿ ಸರಕಾರ ರೂಪುಗೊಳ್ಳುತ್ತಿದ್ದಂತೆ ಡಿ ಕೆ ಶಿವಕುಮಾರ್ ಗೆ ಪ್ರಭಾವಿ ಖಾತೆ ಜೊತೆಗೆ ಉಪಮುಖ್ಯಮಂತ್ರಿ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಉಪಮುಖ್ಯಮಂತ್ರಿ ಮಾಡದೇ ಇದ್ದಾಗ ಇಂದನ ಖಾತೆಯನ್ನೇ ಡಿ ಕೆ ಶಿವಕುಮಾರ್ ಮುಂದುವರೆಸುತ್ತಾರೆ ಎನ್ನಲಾಗಿತ್ತು. ಯಾಕೆಂದರೆ ಮೈತ್ರಿ ಸರಕಾರ ಉಳಿಯಲು ವಿಶ್ವಾಸಮತ ಯಾಚನೆ ಸಂಧರ್ಭದಲ್ಲಿ ಡಿಕೆಶಿ ಪ್ರಯತ್ನ ಅಭೂತಪೂರ್ವವಾದದ್ದು. ಈ ಹಿನ್ನಲೆಯಲ್ಲಿ ಡಿ ಕೆ ಶಿವಕುಮಾರ್ ಗೆ ಇಂದನ ಖಾತೆಯನ್ನು ಉಳಿಸಿಕೊಂಡು ಕೆಪಿಸಿಸಿ ಅಧ್ಯಕ್ಷತೆಯನ್ನು ನೀಡುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವ ಒಪ್ಪಂದದ ಸಂಧರ್ಭದಲ್ಲಿ ಇಂದನ ಖಾತೆಯನ್ನು ಜೆಡಿಎಸ್ ಗೆ ನೀಡಲಾಗಿತ್ತು.‌ ಇದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಕ್ಕಲಿಗ ಸಮರಕ್ಕೆ ಕಾರಣವಾಗಿತ್ತು.

ಜೆಡಿಎಸ್ ನ ಎಚ್ ಡಿ ರೇವಣ್ಣ ರಿಗೆ ಲೋಕೋಪಯೋಗಿ ಮತ್ತು ಇಂಧನ ಖಾತೆ ನೀಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಸಭೆ ನಿರ್ಧರಿಸಿದೆ. ಈ ಮಧ್ಯೆ ಮಧ್ಯಪ್ರವೇಶ ಮಾಡಿರುವ ನಿರ್ಮಲಾನಂದನಾಥ ಶ್ರೀಗಳು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿ ಇಂಧನ ಖಾತೆಯನ್ನು ಡಿ ಕೆ ಶಿವಕುಮಾರ್ ನೀಡಿ ಎಂದು ಸಲಹೆ ಮಾಡಿದ್ದಾರೆ. ಎರಡೂ ಪಕ್ಷದಲ್ಲಿರುವ ಒಕ್ಕಲಿಗರು ಒಗ್ಗಟ್ಟಾಗಿರಬೇಕು ಎಂದು ಶ್ರೀಗಳು ಹೇಳಿದ್ದಾರೆ. ಶ್ರೀಗಳ ಸಲಹೆಯನ್ನು ಪುರಸ್ಕರಿಸಿರೋ ಜೆಡಿಎಸ್ ವರಿಷ್ಠರು ಇಂಧನ ಖಾತೆಯನ್ನು ಡಿ ಕೆ ಶಿವಕುಮಾರ್ ಗೆ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.