ಬೆಂಗಳೂರಿನಲ್ಲಿ ಮಾಲ್​ಗಳ ದರ್ಬಾರ್​ಗಿಲ್ಲ ಬ್ರೇಕ್​- ಎಸ್ಟಿಮ್​ಮಾಲ್​ನಿಂದ ಸ್ಮಶಾನ ಜಾಗಕ್ಕೆ ಕನ್ನ!

ಬೆಂಗಳೂರಿನಲ್ಲಿ ಪ್ರತಿಷ್ಠಿತ ಮಾಲ್​​ಗಳ ಒತ್ತುವರಿ ಆಟಕ್ಕೆ ಬ್ರೇಕ್​​ ಬಿದ್ದಿಲ್ಲ. ಹೆಬ್ಬಾಳದಲ್ಲಿರೋ ಎಸ್ಟೀಮ್​ ಮಾಲ್​​ ಸ್ಮಶಾನ ಜಾಗವನ್ನೇ ಒತ್ತುವರಿ ಮಾಡಿ ತಲೆ ಎತ್ತಿ ನಿಂತಿದೆ. ಬೋಗಸ್ ದಾಖಲೆಗಳನ್ನು ಸೃಷ್ಟಿ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಬಳಿಯ ಸರ್ವೇ ನಂಬರ್ 55 ಹಾಗು 56ರ ಕೋಟಿ ಕೋಟಿ ಮೌಲ್ಯದ 20 ಗುಂಟೆ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಭೂ ಪರಿವರ್ತನೆಗೆ ಅವಕಾಶ ಇಲ್ಲ ಅಂತಾ ಸ್ವತಃ ಡಿಸಿಯೇ ಹೇಳಿದ್ರೂ ಆದೇಶ ಉಲ್ಲಂಘಿಸಿ ಬ್ಯಾಟರಾಯನಪುರ ನಗರಸಭೆ ಅಧಿಕಾರಿಗಳು 1989ರ ನಕಲಿ ದಾಖಲೆ ಆಧಾರ ಮೇಲೆ ಮಾಲ್ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ.

ad


ಮೂರು ಅಂತಸ್ತಿನ ಮಾಲ್ ನಿರ್ಮಾಣಕ್ಕೆ ಕೋಟಿ ಕೋಟಿ ಲಂಚ ಪಡೆದ ಆರೋಪ ಕೇಳಿ ಬರ್ತಿದೆ. ಸ್ಥಳೀಯರ ಹೋರಾಟಕ್ಕೆ ಮಣಿದು ಈ ಹಿಂದೆ ತಹಶೀಲ್ದಾರ್​​ ಮಾಲ್​ನ​ ಒಡತಿ ವಿದ್ಯಾ ಅಗರ್ವಾಲ್​​​​ ಸೇರಿ ಹಲವರಿಗೆ ನೋಟಿಸ್ ನೀಡಿದ್ದರು. ಆದ್ರೆ ಪ್ರಯೋಜನ ಆಗಿಲ್ಲ. ಡಿಸಿ ಕೂಡಾ ಸ್ಥಳೀಯರ ಅರ್ಜಿ ಇತ್ಯರ್ಥ ಮಾಡಿಲ್ಲ. ಇದನ್ನು ಪ್ರಶ್ನೆ ಮಾಡಿ ಕೆ.ನಾರಾಯಣಸ್ವಾಮಿ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ರು.
2017 ಮಾರ್ಚ್ 21ರಂದು ಎರಡು ತಿಂಗಳೊಳಗೆ ವಿಚಾರಣೆ ನಡೆಸುವಂತೆ ಬೆಂಗಳೂರು ಡಿಸಿಗೆ ಕೋರ್ಟ್​ ಆದೇಶ ನೀಡಿತ್ತು. ಆದ್ರೆ ಆದ್ರೆ 1 ವರ್ಷ 5 ತಿಂಗಳು ಕಳೆದ್ರೂ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾಗಿಲ್ಲ. ಎಲ್ಲ ಗೊತ್ತಿದ್ದರೂ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಸುಮ್ಮನಿದ್ದಾರೆ. ಬಡವರ ಮನೆಯನ್ನಾದ್ರೆ ಮುಲಾಜಿಲ್ಲದೇ ಒಡೆಯುವ ಜಿಲ್ಲಾಡಳಿತ ಕೋಟಿಗಟ್ಟಲೇ ಬೆಲೆ ಬಾಳುವ ಜಮೀನು ಕಬಳಿಸಿರುವ ಎಸ್ಟೀಮ್​​ ಮಾಲ್ ಜಾಗವನ್ನು ಒತ್ತುವರಿ ಮಾಡುತ್ತಾ..? ಕಾದುನೋಡಬೇಕಿದೆ.