ಇಲ್ಲಿನ ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ಕಮೋಡ್ ಗಳಂತೂ ಬಳಸುವಂತೆ ಇಲ್ಲ.

ಒಬ್ಬರ ಅಕೌಂಟ್ಗೆ ೨೦೦ ಶೌಚಾಲಯಗಳ ಬಿಲ್ ಫಲಾನುಭವಿಗಳ ಅಕೌಂಟಗೆ ಇಲ್ಲ ಹಣ…

ad


ಒಂದೆಡೆ ಪ್ರಧಾನಿ ಸ್ವಚ್ಚ ಬಾರತ ಎಂದು ದೇಶವನ್ನು ಶುಚಿಗೊಳಿಸಲು ಹೊರಟರೆ ರಾಜ್ಯದ ಅಧಿಕಾರಿಗಳು ಸ್ವಚ್ಚ ಬಾರತ ಯೋಜನೆಯಡಿಯಲ್ಲಿ ಲಕ್ಷ ಲಕ್ಷ ಹಣವನ್ನು ನುಂಗಲು ಹೊರಟಿದ್ದಾರೆ. ಅಷ್ಟಕ್ಕೂ ಆ ಅಧಿಕಾರಿಗಳು ಯಾರು ಏನು ಈ ಪ್ರಕರಣ ಅಂತಿರಾ ಹಾಗಾದರೆ ಈ ವರದಿಯನ್ನು ನೋಡಿ…

  

ಅಲ್ಲಲ್ಲಿ ಬಿದ್ದಿರುವ ಶೌಚಾಲಯ ಸಾಮಗ್ರಿಗಳು, ಮುರಿದಿರುವ ಬಾಗಿಲುಗಳು , ಗಟ್ಟಿಮುಟ್ಟಾಗಿಲ್ಲದ ಕಳಪೆ ಶೌಚಗೃಹಗಳು ಇವೆಲ್ಲ ಕಂಡುಬಂದಿದ್ದು, ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. 2017_18 ರ ಸ್ವಚ್ಚ ಭಾರತ ಮಿಶನ್ ಯೋಜನೆಯಡಿಯಲ್ಲಿ 200 ಕ್ಕೂ ಹೆಚ್ಚು ಶೌಚಾಲಯಗಳ ಬಿಲ್ ನ್ನ ಆಯಾ ಫಲಾನುಭವಿಗಳ ಅಕೌಂಟ್ ಗೆ ಜಮಾ ಆಗಬೇಕಿತ್ತು, ಆದರೆ ಆ ಹಣ ಕೇವಲ ಒಬ್ಬರ ಗುತ್ತಿಗೆದಾರನ ಅಕೌಂಟ್ ಗೆ ಸಂದಾಯ ಮಾಡಿದ್ದಾರೆ. ಆದರೆ ಶೌಚಾಲಯಗಳು ಎಲ್ಲವೂ ಕಳಪೆ ಮಟ್ಟದ ಶೌಚಾಲಯಗಳಿವೆ, ಇನ್ನು ಪಂಚಾಯತ್ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಈ ಗೋಲ್ಮಾಲ್ ಮಾಡಿದ್ದಾರೆ. ಇನ್ನು ಈ ಕುರಿತು ಅಧಿಕಾರಿಗಳನ್ನ ಕೇಳಿದರೆ ಪೋನ್ ಕೂಡಾ ರಿಸಿವ್ ಮಾಡಲ್ಲ, ಆದರೆ ಈ ಅವ್ಯವಹಾರವನ್ನ ಮಾಹಿತಿ ಹಕ್ಕು ಕಾರ್ಯಕರ್ತ ಬಸವರಾಜ ನಾಯಿಕಮನಿ ಅವರು ಮಾಹಿತಿ ಹಕ್ಕಿನಲ್ಲಿ ಬಯಲಿಗೆ ಎಳದಿದ್ದಾರೆ..

ಆದರೆ ಈ ಕುರಿತು ಫಲಾನುಭವಿಗಳನ್ನ ಕೇಳಿದರೆ ನಮ್ಮ ಅಕೌಂಟಗೆ ಹಣ ಬಂದಿಲ್ಲ ಸರ್ ತಯಾರಾಗಿದ್ದ ಶೌಚಾಲಯವನ್ನು ತಂದಿಟ್ಟಿದ್ದಾರೆ, ಆದರೆ ಈ ಕುರಿತು  ಸಂಭಂದಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಮಾಹಿತಿಯನ್ನ ಮಾದ್ಯಮಗಳಿಗೆ ನೀಡುತ್ತಿಲ್ಲ, ಇನ್ನು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪಕಾರ್ಯದರ್ಶಿ ಅವರು ಇಂತಹ ಪ್ರಕರಣಗಳಲ್ಲಿ ತಪ್ಪುಮಾಡಿದವರ ವಿರುದ್ದ ಕ್ರಮ ಜರುಗಿಸಬೇಕು ಎಂದು  ರಾಜ್ಯದ ಎಲ್ಲ ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ಮಾಡಿದ್ದರು ಇನ್ನುವರೆಗೂ ಯಾವುದೆ ಕ್ರಮವನ್ನು ಜರುಗಿಸದೆ ಅಧಿಕಾರಿಗಳು ಸುಮ್ಮನಿರುವದು ಅನುಮಾನಕ್ಕೆ ಎಡೆಮಾಡಿದಂತಾಗಿದೆ….

ಸಂಭಂದಪಟ್ಟ ಅಧಿಕಾರಿಗಳು ಫಲಾನುಭವಿಗಳ ಅಕೌಂಟ್ ಗೆ ಹಣ ಸಂದಾಯ ಮಾಡುವುದನ್ನ ಬಿಟ್ಟು ಗುತ್ತಿಗೆದಾರ ಒಂದೆ ಅಕೌಂಟ್ಗೆ ಸಂದಾಯ ಮಾಡಿ ಹಣ ಕೊಳ್ಳೆ ಹೊಡೆದಿದ್ದಾರೆ. ಇನ್ನೂದರೂ ಜಿ ಪಂ ಸಿಇಓ ಅವರು ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.