“ಸುಳ್ಳು ಆರೋಪ ಬೇಡ, ದಾಖಲೆಗಳಿದ್ದರೆ ಕೊಡಿ”- ಪುಲ್ವಾಮಾ ಪ್ರಕರಣಕ್ಕೆ ಪಾಪಿ ‘ಪಾಕ್’ ಉಡಾಫೆಯ ಪ್ರತಿಕ್ರಿಯೆ

 

adಪುಲ್ವಾಮಾ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಪುಲ್ವಾಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಭಾತದ ಬಳಿ ಯಾವುದೇ ಸಾಕ್ಷಾಧಾರಗಳಿಲ್ಲ. ಸಾಕ್ಷ್ಯಾಧಾರಗಳನ್ನು ಭಾರತ ಒದಗಿಸಿದಾದ್ದಲ್ಲಿ ಖಂಡಿತವಾಗಿಯೂ ನಾವೇ ಅವರ ಮೇಲೆ ಶಿಸ್ತಿನ ಕ್ರಮ ಕೈಕೊಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪುಲ್ವಾಮಾ ಘಟನೆಯ ಬಗ್ಗೆ ನಮಗೂ ವಿಷಾದವಿದೆ. ಇದರ ಹೊಣೆ ಜೈಷ್-ಇ ಸಂಘಟನೆ ಹೊತ್ತಿದ್ದು ಇದರಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಭಾರತ ವಿನಾಕಾರಣ ಯಾವುದೇ ದಾಖಲೆಗಳನ್ನು ನೀಡದೆ ಆರೋಪ ಮಾಡುತ್ತಿದೆ ಎಂದು ಹೇಳಿದರು.