ಸರತಿಸಾಲಿನಲ್ಲಿ ಕುಳಿತ ‘ಕುಮಾರ’ ಪುತ್ರ : ಶ್ರೀಕ್ಷೇತ್ರದಲ್ಲಿ ಸರಳತೆ ಮೆರೆದ ನಿಖಿಲ್

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಅಖಾಡಕ್ಕೆ ಧುಮುಕೋದು ಪಕ್ಕಾ ಆಗ್ತಿದ್ದಂತೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ರೀಕ್ಷೇತ್ರದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಜೊತೆ ಕೆಲಕಾಲ ಸಮಾಲೋಚನೆ ನಡೆಸಿದ ಬಳಿಕ ಯಾವುದೇ ವಿಐಪಿ ಸೌಲಭ್ಯ ಪಡೆಯದೇ ಜನಸಾಮಾನ್ಯರಂತೆ ದೇವರ ದರ್ಶನ ಪಡೆದರು.

ಪೂಜೆ ಸಲ್ಲಿಸಿದ ಬಳಿಕ ನಿಖಿಲ್, ಅನ್ನಪೂರ್ಣದಲ್ಲಿ ಭಕ್ತರ ಜೊತೆ ಸರತಿ ಸಾಲಿನಲ್ಲಿ ಕುಳಿತು ಭೋಜನ ಸ್ವೀಕರಿಸಿದ್ರು. ಈ ಟೈಮಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಎಂಪಿ ಅಭ್ಯರ್ಥಿಯಾಗಿ ನನ್ನನ್ನು ಅಧಿಕೃತ ಘೋಷಣೆ ಮಾಡಿದ್ದಾರೆ. ವರಿಷ್ಠರು ತೀರ್ಮಾನ ಮಾಡಿದ ಮೇಲೆ ಚುನಾವಣೆಗೆ ನಿಲ್ಲಲೇಬೇಕು ಎಂದರು.