ತಿತ್ಲಿ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ- ಭಾರಿ ಮಳೆ ಜನಜೀವನ ಅಸ್ತವ್ಯಸ್ಥ!

 

ad


ತಿತ್ಲಿ ಚಂಡಮಾರುತದ ಅಬ್ಬರ ಜೋರಾಗ್ತಿದ್ದು, ಒಡಿಶ್ಸಾ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದೆ. ಒಡಿಶ್ಸಾದಿಂದ ಆರಂಭವಾದ ಚಂಡಮಾರು ಆಂಧ್ರ ಪ್ರದೇಶಕ್ಕೂ ನುಗ್ಗಿದ್ದು, ಅಲ್ಲಿಯೂ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಒಡಿಶಾದಲ್ಲಿ ಗಂಟೆಗೆ 130 ಕಿಲೋ ಮೀಟರ್​​ ವೇಗದಲ್ಲಿ ಗಾಳಿ ಬೀಸುತ್ತಿದ್ದು ಆಂಧ್ರ ಪ್ರದೇಶದಲ್ಲಿ ಗಾಳಿಯವೇಗ ಗಂಟೆಗೆ 60 ಕಿಮೀಯಷ್ಟಿದೆ.
ಇದ್ರಿಂದ ಒಡಿಶಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ನೂರಾರು ಮರಗಳು ಮತ್ತು ವಿದ್ಯುತ್​​​ ಕಂಬಗಳು ಧರೆಗುರುಳಿವೆ. ಗೋಪಾಲಪುರ್​​ನಲ್ಲಿ ಮಳೆ ಅಬ್ಬರಕ್ಕೆ ಭಾರೀ ಗುಡ್ಡವೇ ಕುಸಿದಿದ್ದು, ಮುಂಜಾಗ್ರತಾ ಕ್ರಮವಾಗಿ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.

ಇತ್ತ ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಒಳನಾಡಿಗೂ ಮಳೆ ವ್ಯಾಪಿಸಿಕೊಳ್ಳುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಆಂಧ್ರ ಹಾಗೂ ಒಡಿಶಾದ ಹಲವೆಡೆ ರೆಡ್ ಅಲರ್ಟ್​ ಘೋಷಣೆ ಮಾಡಿದ್ದು ಎನ್​ಡಿಆರ್​ಎಫ್ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ರಜೆ ನೀಡಲಾಗಿದೆ. ಇನ್ನು ಕರ್ನಾಟಕದಲ್ಲೂ ಚಂಡಮಾರುತದ ಎಫೆಕ್ಟ್​ನಿಂದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಮಂಗಳೂರು ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ ಎನ್ನಲಾಗಿದೆ.