ಅಧಿಕಾರಿಗೆ ರ‌್ಯಾಸ್ಕಲ್ ಎಂದ ಸಚಿವ- ಆರೋಗ್ಯ ಸಚಿವರ ಅನಾರೋಗ್ಯಕರ ಮಾತು

ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಹರಿಹಾಯೋದು ಸಾಮಾನ್ಯವಾದ ಸಂಗತಿ. ಆದರೇ ಬಳಸೋ ಭಾಷೆಯ ಮೇಲಾದ್ರೂ ಹಿಡಿತವಿರಬೇಕು. ಆದರೇ ಆರೋಗ್ಯ ಸಚಿವ ರಮೇಶ್ ಕುಮಾರ್ ಇವತ್ಯಾಕೋ ಮಾತನಾಡೋ ಭಾಷೆಯ ಮೇಲೆ ಹಿಡಿತವನ್ನೇ ಕಳೆದುಕೊಂಡಿದ್ದರು. ಅದರ ಫಲವಾಗಿ ಅಧಿಕಾರಿಗಳನ್ನೇ ಹಿಗ್ಗಾ-ಮುಗ್ಗಾ ಬೈಯ್ದು ಸುದ್ದಿಯಾಗಿದ್ದಾರೆ.

ಹೌದು ಕೋಲಾರದ ಸುಗುಟೂರು ಗ್ರಾಮಕ್ಕೆ ರಸ್ತೆ ಅಗಲೀಕರಣ ಕಾಮಗಾರಿ ಚಾಲನೆ ನೀಡಲು ಆಗಮಿಸಿದ್ದ ಸಚಿವ ರಮೇಶ್ ಕುಮಾರ ಹೀಗೆ ದರ್ಪ ಮೆರೆದಿದ್ದಾರೆ. ಇಂಜೀನಿಯರ್​ ಸೇರಿದಂತೆ ವಿವಿಧ ಅಧಿಕಾರಿಗಳ ಮೇಲೆ ಅಸಮಧಾನ ವ್ಯಕ್ತಪಡಿಸಿದ ರಮೇಶ್ ಕುಮಾರ್, ಅಧಿಕಾರಿಗಳಿಗೆ ರಾಸ್ಕಲ್, ಯುಸ್ ಲೆಸ್‌‌ ಎಂದು ಹರಿಹಾಯ್ದಿದ್ದಾರೆ.
ಸುಗುಟೂರಿನಲ್ಲಿ ಸಚಿವರು ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಸಾರ್ವಜನಿಕರು ಅಧಿಕಾರಿಗಳು ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರಿಂದ ಕೆರಳಿದ ಸಚಿವ ರಮೇಶ್ ಕುಮಾರ್, ಜೂನಿಯರ್ ಇಂಜಿನಿಯರ್ ವೆಂಕಟೇಶ್ ಮೇಲೆ ಹರಿಹಾಯ್ದರು. ತಕ್ಷಣ ಎಚ್ಚೆತ್ತುಕೊಂಡ ಬೆಂಬಲಿಗರು ಮಾಧ್ಯಮದವರು ಸ್ಥಳದಲ್ಲಿದ್ದಾರೆ ಎಂದು ಸಚಿವರನ್ನು ಸಮಾಧಾನ ಪಡಿಸಿದರು.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here