ಕಳೆದವಾರ ವಿಶ್ವದಾದ್ಯಂತ ನಡೆದಿದ್ದ ವ್ಯಾಪಕ ಸೈಬರ್ ದಾಳಿ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್​ವೇರ್ ಅಪ್​ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ. ವಿಶ್ವದಾದ್ಯಂತ ಏಕಕಾಲದಲ್ಲಿ ನಡೆದ ಸೈಬರ್ ದಾಳಿಯಿಂದಾಗಿ ಬ್ಯಾಂಕ್​ಗಳ ಎಟಿಎಂ ಮೇಲೆ ತೀವ್ರತರ ಪರಿಣಾಮ ಬೀರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಟಿಎಂಗಳಲ್ಲಿನ ಸಿಸ್ಟಮ್ ಅಪ್​ಡೇಟ್ ಕಾರ್ಯಕ್ಕೆ ಆರ್​ಬಿಐ ಸೂಚನೆ ನೀಡಿದೆ. ಇನ್ನು, ಎಟಿಎಂ ಅಪ್​ಡೇಟ್​ ಆಗೋವರೆಗೂ ಹಣ ತುಂಬದಂತೆ ಆರ್​ಬಿಐ ಸೂಚನೆ ನೀಡಿದೆ. ಇದರಿಂದಾಗಿ ಮತ್ತೆ ನಗದು ಹಣಕ್ಕಾಗಿ ಹಾಹಾಕಾರ ಏಳುವ ಸಾಧ್ಯತೆಗಳಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here