ಕಮಲದಿಂದ ಆಪರೇಶನ್​ ಟ್ವೆಂಟಿಗೆ ಚಾಲನೆ- ನಗರದ ಹೊಟೇಲ್​ನಲ್ಲಿ ಸಿದ್ಧವಾಗುತ್ತಿದೆ ರೆಡ್ಡಿ ಬ್ರದರ್ಸ್​ ಸೂಪರ್ ಪ್ಲ್ಯಾನ್ !

 

ad

ಬಿ.ಎಸ್.ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಬಹುಮತ ಸಾಬೀತುಪಡಿಸಲು ಮ್ಯಾಜಿಕ್ ನಂಬರ್​ ಅಗತ್ಯವಿದ್ದು, ಬಹುಮತ ಸಾಬೀತುಪಡಿಸಲು ಬರೋಬ್ಬರಿ 20 ಶಾಸಕರನ್ನು ಕಾಂಗ್ರೆಸ್​ನಿಂದ ಸೆಳೆಯಲು ಬಿಜೆಪಿ ಸರ್ಕಸ್​ ಆರಂಭಿಸಿದೆ.

 

ಹೌದು ಶತಾಯ-ಗತಾಯ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಶಾಸಕರನ್ನು ಸೆಳೆಯಲು ಸರ್ಕಸ್ ಆರಂಭಿಸಿದೆ. ಇನ್ನು ಈ ಆಫರೇಶನ್​ ಕಮಲಕ್ಕೆ ರೆಡ್ಡಿ ಬ್ರದರ್ಸ್​​​ ಬೆನ್ನೆಲುಭಾಗಿ ನಿಂತಿದ್ದು, ಕಾಂಗ್ರೆಸ್​ಗೆ ಶಾಸಕರನ್ನು ಕರೆತರುವ ಜವಾಬ್ದಾರಿಯನ್ನು ಶ್ರೀರಾಮುಲು ಹಾಗೂ ರೆಡ್ಡಿ ಹೆಗಲಿಗೆ ಬಿಜೆಪಿ ನೀಡಿದೆ. ಇನ್ನು ನಗರದ ತಾಜ್ ವೆಸ್ಟ್​ ಎಂಡ್​ನಲ್ಲಿ ರೆಡ್ಡಿ ಬ್ರದರ್ಸ್​ ಬಿಜೆಪಿ ಬಚಾವೂ ಕಾರ್ಯತಂತ್ರಕ್ಕೆ ಮುನ್ನುಡಿ ಬರೆದಿದ್ದು, 10 ಕೋಟಿ ದುಡ್ಡು ಜೊತೆಗೆ ಕ್ಯಾಬಿನೇಟ್​​ ಸ್ಥಾನ ನೀಡುವ ಆಮಿಷ ಒಡ್ಡಿ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಬಿಜೆಪಿ ನಿರ್ಧರಿಸಿದ್ದು, ಈಗಾಗಲೇ ಶಾಸಕರ ಸಂಪರ್ಕದಲ್ಲಿರುವ ರೆಡ್ಡಿ ಬ್ರದರ್ಸ್​ ಎಮ್​ಎಲ್​ಎಗಳ ಮನವೊಲಿಸುವಲ್ಲಿ ನಿರತರಾಗಿದ್ದಾರೆ. ಒಂದೊಮ್ಮೆ ಮರುಚುನಾವಣೆಯಲ್ಲಿ ಸೋತರೆ ಎಮ್​ಎಲ್​ಸಿ ಮಾಡಿ ಕ್ಯಾಬಿನೇಟ್​​ ಸ್ಥಾನ 20 mla ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಸರ್ಕಾರ ಉಳಿಸಲು ರೆಡ್ಡಿ ಬ್ರದರ್ಸ್​ ಗೆ ಬಿಜೆಪಿ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎನ್ನಲಾಗುತ್ತಿದೆ.