ಕಾಂಗ್ರೆಸ್ ನ ಟಿಪ್ಪು ಖಡ್ಗಕ್ಕೆ ಬಿಜೆಪಿಯಿಂದ ಓಬವ್ವನ ಒನಕೆ ಉತ್ತರ !!

ಸರಕಾರದ ಟಿಪ್ಪು ಜಯಂತಿಗೆ ಕಳೆದ ಬಾರಿಯಂತೆ ಈ ಬಾರಿಯೂ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಇಂದು ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಟಿಪ್ಪು ಧರ್ಮಾಂಧನಾಗಿ ಹಲವರ ಸಾವು ನೋವುಗಳಿಗೆ ಕಾರಣನಾಗಿದ್ದ. ಅತ್ಯಾಚಾರಿ, ಮತಾಂತರಿ ಟಿಪ್ಪು ಎಂದು ಇತಿಹಾಸದ ಪುಟಗಳು ಹೇಳುವುದರಿಂದ ಆತನ ಜಯಂತಿಯನ್ನು ಮಾಡಬಾರದು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಟಿಪ್ಪು ಜಯಂತಿ ಎನ್ನುವುದು ವೀರ ವನಿತೆ ಒನಕೆ ಓಬವ್ವಗೆ ಮಾಡುವ ಅಪಚಾರ. ಹೈದರಾಲಿ ಸೈನ್ಯವನ್ನು ಸೋಲಿಸಿಯೇ ಓಬವ್ವ ಒನಕೆ ಓಬವ್ವಳಾಗಿದ್ದು. ಕರ್ನಾಟಕದ ಇಂತಹ ವೀರವನಿತೆಗೆ ಅವಮಾನ ಮಾಡಬಾರದು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಲವು ಒನಕೆ ಓಬವ್ವರ ವೇಷದಾರಿಗಳು ಪಾಲ್ಗೊಂಡಿದ್ದು ಪ್ರತಿಭಟನೆಯನ್ನು ಸಾಂಕೇತಿಕಗೊಳಿಸಿತ್ತು. ಬಿಜೆಪಿ ನಾಯಕರಾದ ಅನ್ವರ್ ಮಾಣಿಪ್ಪಾಡಿ, ಚೀ ನಾ ರಾಮು ಮುಂತಾದವರು ಉಪಸ್ಥಿತರಿದ್ದರು.

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here