ರಾತೋರಾತ್ರಿ IAS ,IPS , IFS ಅಧಿಕಾರಿಗಳ ಎತ್ತಂಗಡಿ. ಸರ್ಕಾರದ ಭರ್ಜರಿ ಸರ್ಜರಿ

ರಾಜ್ಯಗುಪ್ತ ದಳದ ಮುಖ್ಯಸ್ಥರಾಗಿದ್ದ ಅಮರ್ ಕುಮಾರ್ ಪಾಂಡೆಯನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲಾಗಿದ್ದು ಆ ಜಾಗಕ್ಕೆ ಬಿ. ದಯಾನಂದ್ರವರನ್ನು ನೇಮಿಸಲಾಗಿದೆ. ದೋಸ್ತಿ ಸರ್ಕಾರವು ಆಪರೇಷನ್ ಕಮಲ ವಿಫಲವಾದರಿಂದ ಈ ಕಾರಣಕ್ಕೆ ಅಮರ್ ಕುಮಾರ್ ಪಾಂಡೆ  ವರ್ಗಾವಣೆ ಮಾಡಲಾಗಿದೆಯೇ….? ಎಂಬ ಪ್ರಶ್ನೆ ಉದ್ಭವವಾಗಿದೆ.

ಇಷ್ಟಲ್ಲದೆ ರಾತೋರಾತ್ರಿ ಸರ್ಕಾರ IAS ,IPS , IFS ಎಂಬಂತೆ 60 ಮಂದಿ ಅಧಿಕಾರಿಗಳನ್ನು ಬೃಹತ್ ಪ್ರಮಾಣದಲ್ಲಿ ವರ್ಗಾವಣೆ ಮಾಡಿದೆ. ಹಾಗೂ IASನ 29 ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರ ಕೇಂದ್ರ ವಲಯ DGPಯಾಗಿದ್ದ ದಯಾನಂದ್ ರವರು ಗುಪ್ತಚರ ಇಲಾಖೆಗೆ, ಗುಪ್ತಚರ . ಇಲಾಖೆ ADPಯಾಗಿದ್ದ ಎ.ಕೆ ಪಾಂಡೆ ಅವರನ್ನು ಮಾನವ ಹಕ್ಕು ಆಯೋಗದ ADPಯಾಗಿ, ಪೂರ್ವ ವಲಯದ IGPಯಾಗಿ ಅಮೃತ್ ಪೌಲ್ ರವರನ್ನು, ಕೇಂದ್ರ ವಲಯದ IGPಯಾಗಿ ಶರಶ್ಚಂದ್ರರವರನ್ನು, ಮೈಸೂರು ಪೋಲೀಸ್ ಅಕಾಡೆಮಿIGPಯಾಗಿ ವಿಪುಲ್ ಕುಮಾರ್ರವರನ್ನು, ಬಳ್ಳಾರಿ ರೇಂಜ್ IGPಯಾಗಿ ನಂಜುಂಡಸ್ವಾಮಿಯವರನ್ನು, ಬೆಂಗಳೂರು ಕಾರಾಗೃಹ IGPಯಾಗಿ ಹೆಚ್.ಎಸ್ ರೇವನ್ನಾರವರನ್ನು, ಗುಪ್ತಚರ ಇಲಾಖೆ DGPಯಾಗಿ ಸುಬ್ರಮಹನೇಶ್ವರ ರಾವ್ರವರನ್ನು, CAR ಜಂಟಿ ಆಯುಕ್ತರಾಗಿ ಟಿ.ಆರ್ ಸುರೇಶ್ರವರನ್ನು, ಮಂಗಳೂರು ಆಯುಕ್ತರಾಗಿ ಸಂದೀಪ್ ಪಾಟೀಲ್‌ರವರನ್ನು, ಪಿ.ಎಸ್ ಹರ್ಷರವರನ್ನು ಸಾರಿಗೆ ವಿಚಕ್ಷಣ ದಳ ನಿರ್ದೇಶಕರಾಗಿ,ANF, DIG ಯಾಗಿ ವಿಕಾಸ್ ಕುಮಾರ್ರವರನ್ನು ನೇಮಿಸಿದ್ದು, ಇನ್ನೂ 29 ಮಂದಿ IPSಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಸಿಂಗಂ ಖ್ಯಾತಿಯ ಅಣ್ಣಾಮಲೈರವರ ಹೆಸರು ಕೂಡ ಸೇರಿತ್ತು, ಆದರೆ ಸಾರ್ವಜನಿಕರ ವಲಯದಿಂದ ಕೇಳಿ ಬಂದ ಆಗ್ರಹದ ಮೇರೆಗೆ . ಮುಖ್ಯಮಂತ್ರಿ ಕುಮಾರ ಸ್ವಾಮಿ ಅಣ್ಣಾಮಲೈಯವರ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ.