ಕೇಂದ್ರ ಚುನಾವಣಾ ಆಯೋಗದ ಕೆಂಗಣ್ಣು! ಮತ್ತೆ ಸಂಕಷ್ಟಕ್ಕೆ ಸಿಲುಕಿದ ‘ಪಿಎಂ ಮೋದಿ’!!

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಬಾಲಿವುಡ್​ ಬಹುನಿರೀಕ್ಷಿತ ‘ಪಿಎಂ ಮೋದಿ’ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಮೋದಿ ಬಯೋಪಿಕ್​​ ರಿಲೀಸ್​ಗೆ ಚುನಾವಣಾ ಆಯೋಗ ಅಡ್ಡಿ ಪಡಿಸಿದೆ.

ad

ಕಾಂಗ್ರೆಸ್‌ ಕಾರ್ಯಕರ್ತ ಅಮನ್ ಪನ್ವಾರ್ ಅವರು ಮುಂಬರುವ ಲೋಕಸಭಾ ಚುನಾವಣೆ ಮುಗಿಯುವವರೆಗೂ ಮೋದಿ ಜೀವನಾಧಾರಿತ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದು ವೀಕ್ಷಕರು ಮತ್ತು ಮತದಾರರನ್ನು ಪ್ರಭಾವಿಸುತ್ತದೆ. ಹಾಗಾಗಿ ಈ ಚಿತ್ರದ ಜಾಹೀರಾತು ಮತ್ತು ಪ್ರಚಾರ ಕೂಡ ಚುನಾವಣೆ ನೀತಿ ಸಂಹಿತೆಯ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿ ಸಲ್ಲಿಸಿದ್ದರು.

ನಿನ್ನೆಯಷ್ಟೆ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌ ‘ಇದೊಂದು ವಿವಾದದ ವಿಷಯವೇ ಅಲ್ಲ, ಅರ್ಜಿದಾರರು ಬೇಕಿದ್ದರೆ ಚುನಾವಣಾ ಆಯೋಗದ ಮೊರೆ ಹೋಗಬಹುದು’ ಎಂದು ತಿಳಿಸಿತ್ತು. ನಟ ವಿವೇಕ್ ಓಬೆರಾಯ್ ಅಭಿನಯಿಸಿದ್ದ ‘ಪಿಎಂ ಮೋದಿ’ ನಾಳೆ ರಿಲೀಸ್​ ಆಗಬೇಕಿತ್ತು.

ಆದರೆ ವಿಪಕ್ಷಗಳು ಚಿತ್ರವನ್ನ ಬಿಡುಗಡೆ ಮಾಡಬಾರದು ಅಂತ ಆಕ್ಷೇಪಿಸಿದ್ದವು. ಇಂದು ಬೆಳಗ್ಗೆಯಷ್ಟೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದಿರುವ ಚಿತ್ರದ ನಿರ್ಮಾಪಕರು, ‘ಮೊದಲ ಹಂತದ ಮತದಾನ ನಡೆಯಲಿರುವ ಏ.11ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಲೋಕಸಭೆ ಚುನಾವಣೆ ಮುಗಿಯುವವರೆಗೂ ಚಿತ್ರವನ್ನ ಬಿಡುಗಡೆ ಮಾಡದಂತೆ ಕೇಂದ್ರ  ಚುನಾವಣಾ ಆಯೋಗ ಸೂಚನೆ ನೀಡಿದೆ.