ಹಾವೇರಿಯಲ್ಲಿ ‘ರಾಗಾ’ ಗುಡುಗು – ಕೈ ಪರಿವರ್ತನಾ ರ‍್ಯಾಲಿ..!

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾವೇರಿಯಲ್ಲಿ ಚುನಾವಣಾ ಕಹಳೆ ಮೊಳಗಿಸಿದ್ದಾರೆ. ಹಾವೇರಿಯ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಆಯೋಜಿಸಿರೋ ಕಾಂಗ್ರೆಸ್ ಪರಿವರ್ತನಾ ರ‍್ಯಾಲಿಗೆ ರಾಹುಲ್​ ಗಾಂಧಿ ಚಾಲನೆ ನೀಡಿದ್ದಾರೆ. ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿರೋ ರಾಹುಲ್‌  ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ – ‘ಜಮೀರ್ ಅಹ್ಮದ್ ಖಾನ್’ ರ‍್ಯಾಲಿ ನೇತೃತ್ವ ವನ್ನು ವಹಿಸಿ ಕೊಂಡಿದ್ದಾರೆ ಅದರ ಜೊತೆಯಲ್ಲೇ ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ‘ಕೆಸಿ ವೇಣುಗೋಪಾಲ್​​ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್​​​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​, ಡಿಕೆ ಶಿವಕುಮಾರ್​​​, ಸೇರಿದಂತೆ ಕಾಂಗ್ರೆಸ್​ ಮುಖಂಡರು ಭಾಗಿಯಾಗಿದ್ದಾರೆ ಹಾಗೆಯೇ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದಾರೆ.

ರಾಹುಲ್ ಗಾಂಧಿ ಅವರಿಗೆ  ಎಸ್‌ಪಿಜಿ ತಂಡ ಭದ್ರತೆ ಒದಗಿಸುವುದರ ಸಲುವಾಗಿ ಹಾವೇರಿಗೆ ಆಗಮಿಸಿದೆ. ಸಮಾವೇಶದ ಸ್ಥಳ, ವಾಹನ ಸಂಚಾರ ವ್ಯವಸ್ಥೆ ಮುಂತಾದವುಗಳ ಮಾಹಿತಿಯನ್ನು ತಂಡ ಸ್ಥಳೀಯ ಪೊಲೀಸರಿಂದ ಪಡೆದುಕೊಂಡಿದೆ. ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ 8 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 1 ಲಕ್ಷ ಜನರು ಆಗಮಿಸಲಿದ್ದಾರೆ. 40 ಸಾವಿರ ಕಾರ್ಯಕರ್ತರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ’ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ ಹೇಳಿಕೆ ನೀಡಿದ್ದಾರೆ.

ಮೋದಿ ಸರ್ಕಾರ 5 ವರ್ಷದಲ್ಲಿ ಏನೂ ಮಾಡಿಲ್ಲ , ಕರ್ನಾಟಕ ಸರ್ಕಾರವನ್ನ ಮೋದಿ ರೈತ ವಿರೋದಿ ಎಂದಿದ್ದಾರೆ . ಕಾಂಗ್ರೆಸ್ ಸರ್ಕಾರವು ಮಾತು ಕೊಟ್ಟಂತೆ ರೈತರ ಸಾಲ ಮನ್ನಾ ಮಾಡಿದ್ದೇವೆ. ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ 10ಕೇವಲ ದಿನದಲ್ಲಿ ಸಾಲ ಮ್ಯಾನ ಮಾಡಿದೆ. ಮೋದಿ ಅಧಿಕಾರಕ್ಕೆ ಬಂದನಂತರ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ, ಕಪ್ಪು ಹಣದ ವಿರುದ್ದ ಹೊರಡುತ್ತಿರುವುದಾಗಿ ನಿಮ್ಮನ್ನು ಸಾಲಿನಲ್ಲಿ ನಿಲ್ಲಿಸಿದರು. ನಿಮ್ಮ ಹಣವನ್ನು ಪಡೆದು ದೇಶದ ಸೇವಕ ಮಲ್ಯ , ಅಂಬಾನಿಗೆ ನೀಡಿದ್ದಾರೆ. ಮೋದಿ 30 ಸಾವಿರ ಕೋಟಿಯನ್ನ ಅಂಬಾನಿ ಜೇಬಿಗೆ ಹಾಕಿದ್ದಾರೆ. ನರೇಂದ್ರ ಮೋದಿ ‘ಚೌಕಿ ದಾರ್’ ಅಲ್ಲ ‘ಚೋರ್’ ಎಂದು ಮೋದಿ ವಿರುದ್ದ ‘ರಾಗಾ’ ಗುಡುಗಿದರು.