Parvathamma Rajkumar hospitalized following prolonged illness | ಸ್ತನ ಕ್ಯಾನ್ಸರ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಅವ್ರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

0
8

ಸ್ತನ ಕ್ಯಾನ್ಸರ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್ ಅವ್ರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ನಾಲ್ಕು ದಿನಗಳ ಹಿಂದೆ ಎಂಎಸ್​ ರಾಮಯ್ಯ ಆಸ್ಪತ್ರೆಗೆ ಪಾರ್ವತಮ್ಮ ಅವ್ರನ್ನ ದಾಖಲು ಮಾಡಲಾಗಿದೆ. ಸ್ವಲ್ಪ ಮಟ್ಟಿಗೆ ಕಿಡ್ನಿ ವೈಫಲ್ಯಗೊಂಡಿದ್ದರಿಂದ ಉಸಿರಾಟದ ತೊಂದರೆ ಉಂಟಾಗಿದೆ. ಹೀಗಾಗಿ, ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
=====
ಇನ್ನು, ಪಾರ್ವತಮ್ಮನವರ ಆರೋಗ್ಯ ಸ್ಥಿತಿ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದರಿಂದ ನಿನ್ನೆ ಆಸ್ಪತ್ರೆಯ ವೈದ್ಯರು ಹಾಗೂ ಪಾರ್ವತಮ್ಮನವರ ಮಕ್ಕಳಾದ ಶಿವರಾಜ್​ ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್​ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತ್ನಾಡಿದ ಶಿವಣ್ಣ, ಅಮ್ಮನ ಆರೋಗ್ಯದ ಬಗ್ಗೆ ಗಾಳಿ ಸುದ್ದಿಗಳಿಂದಾಗಿ ಎಲ್ಲರಿಗೂ ಗಾಬರಿಯಾಗುವಂತಾಗಿದೆ. ಯಾವುದೇ ರೀತಿಯ ಗಾಳಿ ಸುದ್ದಿ ಹಬ್ಬಿಸಬಾರದು ಅಂತ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here