ಲೋಕಕಲ್ಯಾಣಕ್ಕಾಗಿ ಸಮಾಧಿ ತಪಸ್ಸು…..ತಪಸ್ಸು ಕೈಗೊಂಡ ರಾಚೂಟೀಶ್ವರ ಶಿವಾಚಾರ್ಯ ಸ್ವಾಮಿಗಳು.

ಅದೊಂದು ಪವಾಡ ನಡೆದಿರೋ ಕ್ಷೇತ್ರ. ಅಲ್ಲಿ ಬದುಕಿದ್ದ ಪವಾಡ ಪುರುಷರು ಅನೇಕ ಪವಾಡಗಳ ಮೂಲಕ ಜನರಿಗೆ ಒಳಿತನ್ನು ಮಾಡಿದ್ದಾರೆ. ಈಗ್ಲೂ ಸಹ ಅಂತಹುದೇ ಒಂದು ಪವಾಡ ಅಲ್ಲಿ ನಡೆಯೋದಕ್ಕೆ ತಯಾರಾಗಿದೆ. ಒಬ್ಬ ವ್ಯಕ್ತಿ ೭೭೫ ವರ್ಷ ಬದುಕೋ ಮೂಲಕ ಆ ಸ್ಥಳದ ಅಕ್ಕಪಕ್ಕದಲ್ಲೆಲ್ಲಾ ಹೆಸರು ವಾಸಿಯಾಗಿದ್ರು.  ಆ ಸ್ಥಳ ಯಾವುದು ಎನ್ನೋದಕ್ಕೆ ಈ ಸ್ಟೋರಿ ನೋಡಿ ನಿಮಗೇ ಗೊತ್ತಾಗಿತ್ತೆ ಅದರ ಮಹಿಮೆ ಏನು ಎನ್ನೋದು…


ಇಲ್ಲೊಬ್ಬ ಶ್ರೀಗಳು ಲೋಕ ಕಲ್ಯಾಣ, ಮಹದಾಯಿ ಯೋಜನೆ ಇತ್ಯರ್ಥ ಹಾಗೂ ರೈತರ ನೆಮ್ಮದಿಗಾಗಿ ಜೀವಂತ ಸಮಾಧಿ ಯೋಗ ನಡೆಸಿದ್ದಾರೆ. ನೀರು, ಆಹಾರ ಎಲ್ಲವೂ ತ್ಯಜಿಸಿ ಮಠದ ಗರ್ಭಗುಡಿಯಲ್ಲಿ ಸ್ವಲ್ಪವೂ ಗಾಳಿ, ಬೆಳಕು ಇಲ್ಲದೇ ಜೀವಂತ ಸಮಾಧಿ ಯೋಗ ತಪಸ್ಸು ನಡೆಸಿದ್ದಾರೆ. ಆ ಗ್ರಾಮದಲ್ಲಿ ನಿತ್ಯ ಪೂಜೆ ಪುನಸ್ಕಾರ ನಡೆದಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಶ್ರೀಗಳ ಈ ಪವಾಡ ನೋಡೋಕೆ ಭಕ್ತರ ದಂಡೇ ಹರಿದು ಬರ್ತಾ ಇದೆ.

ಅಂದಹಾಗೆ ನಾವೀಗ ಹೇಳ್ತಿರೋದು ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಬೂದೇಶ್ವರ ಮಠದಲ್ಲಿ ನಡೆಯುತ್ತಿರೋ ಸಮಾಧಿ ಯೋಗದ ಕುರಿತು. ಇವರು ಸಮಾಧಿ ಯೋಗವನ್ನು ಕೈಗೊಂಡು, ಆ ಮೂಲಕ ಲೋಕ ಕಲ್ಯಾಣ ಮಾಡೋದಕ್ಕೆ ತಯಾರಾಗಿರೋ ಇವರು ಅಂತೂರು ಬೆಂತೂರು ಗ್ರಾಮದ ಬೂದೇಶ್ವರ ಮಾಠದ ರಾಚೂಟೀಶ್ವರ ಶಿವಾಚಾರ್ಯ ಶ್ರೀಗಳು. ಗರ್ಭಗುಡಿಯಲ್ಲಿ ಸ್ವಾಮೀಜಿ ಜೀವಂತ ಸಮಾಧಿ ಯೋಗ ತಪಸ್ಸು…… ಗಾಳಿ, ಬೆಳಕು, ಅನ್ನ, ನೀರು ಇಲ್ಲದೇ ಸ್ವಾಮೀಜಿ ತಪಸ್ಸು….. ಇದೆಲ್ಲವೂ ಈಗ ಇಲ್ಲಿ ನಡೆಯುತ್ತಿರೋ ವಿದ್ಯಮಾನಗಳು. ರಾಚೂಟೀಶ್ವರ ಶಿವಾಚಾರ್ಯ ಸ್ವಾಮಿಗಳೇ ಜೀವಂತ ಸಮಾಧಿ ಯೋಗ ತಪಸ್ಸು ಮಾಡುತ್ತಿದ್ದು, ಲೋಕ ಕಲ್ಯಾಣ ಹಾಗೂ ಉತ್ತರ ಕರ್ನಾಟಕದ ರೈತರ ಪ್ರಮುಖ ಬೇಡಿಕೆ ಮಹದಾಯಿ ಯೋಜನೆ ಜಾರಿಯಾಗ್ಲಿ ಅಂತ ೧೧ ದಿನಗಳ ಸಮಾಧಿ ತಪಸ್ಸು ಮಾಡ್ತಿದ್ದಾರೆ. ಜೂನ್ ೧೫ ರಂದು ಬೂದೀಶ್ವರ ಮಠದ ಕರ್ತೃ ಗದ್ದುಗೆ ಇರೋ ಕೋಣೆಯಲ್ಲಿ ರಾಚೂಟೀಶ್ವರ ಶಿವಾಚಾರ್ಯರು ಹೋದ ನಂತರ ಇಡೀ ಕೋಣೆಯನ್ನು ಗಾಳಿಯೂ ಹೊರಬರದ ಹಾಗೆ ಮುಚ್ಚಿ ಇಟ್ಟಿಗೆಯಿಂದ ಗೋಡೆ ಕಟ್ಟಲಾಗಿದೆ. ಇನ್ನು ಈ ಭಾಗದ ಪ್ರಮುಖ ಸಮಸ್ಯೆಯಾದ ಮಹದಾಯಿ ಕಳಸಾ ಬಂಡೂರಿ ಸಮಸ್ಯೆ ಬಗೆಹರಿಯಲಿ, ದೇಶದ ಸೈನಿಕನ ರಟ್ಟೆಗೆ ಬಲ ಬರಲಿ, ಸಮೃದ್ಧವಾದ ಮಳೆ ಬೆಳೆಯಾಗಲಿ ಅಂತ ಶ್ರೀಗಳು ಈ ಸಮಾಧಿ ತಪಸ್ಸನ್ನು ಕೈಗೊಂಡಿದ್ದಾರಂತೆ. ಸ್ವತಃ ಸ್ವಪ್ನಶಾಸ್ತ್ರ ವಿಚಾರದಲ್ಲಿ ಪಿಎಚ್ಡಿ ಪಧವೀಧರರಾಗಿರೋ ಶ್ರೀಗಳು, ಸಂಶೋಧನಾರ್ಥವಾಗಿಯೂ ಈ ಸಮಾಧಿ ತಪಸ್ಸನ್ನು ಆಚರಿಸ್ತಿರೋದಾಗಿ ಮಠದ ಶ್ರೀಗಳು ಹೇಳಿದ್ದಾರೆ.