ಕಿಮ್ಸ ಆಸ್ಪತ್ರೆಯ ಲೇಡೀಸ್ ಹಾಸ್ಟೆಲ್ ಗೆ ರಾತ್ರಿ ನುಗ್ಗಿದ್ಯಾರು..? ಈ ಸುದ್ದಿ ಓದಿ..

ಕಿಮ್ಸ ಆಸ್ಪತ್ರೆಯ ಲೇಡೀಸ್ ಹಾಸ್ಟೆಲ್ ಗೆ ರಾತ್ರಿ ನುಗ್ಗಿದ್ಯಾರು..? ಈ ಸುದ್ದಿ ಓದಿ..

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯ ಲೇಡೀಸ್ ಹಾಸ್ಟೆಲ್ ನಲ್ಲಿ ಅಭದ್ರತೆ ಕಾಡ್ತಾ ಇದೆ. ಹಾಗಾಗಿ ತರಗತಿ ಬಹಿಷ್ಕಾರ ಮಾಡಿದ ವಿದ್ಯಾರ್ಥಿನಿಯರು ಏನು ಮಾಡಿದ್ರು ಗೊತ್ತಾ..?    

ad


ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನೂರಾರು ವಿದ್ಯಾರ್ಥಿನಿಯರು ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ವಿರುದ್ಧ ಪ್ರತಿಭಟನೆ ಮಾಡಿದ್ರು.

ನಿನ್ನೆ ರಾತ್ರಿ ಕಿಮ್ಸ್ ಆವರಣದಲ್ಲಿರೋ ಅರ್ಚನಾ ಲೇಡೀಸ್ ಹಾಸ್ಟೆಲ್ ಗೆ ಇಬ್ಬರು ಕಿಡಗೇಡಿಗಳು ರಾತ್ರೋರಾತ್ರಿ ಮುಖಕ್ಕೆ ಬಣ್ಣವನ್ನು ಹಚ್ಚಿಕೊಂಡು ಬಂದಿದ್ದಾರೆ. ಹೀಗಾಗಿ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರು ಭಯಗೊಂಡು ಕಿಮ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಆದ್ರೆ, ಕಿಮ್ಸ್ ಆಡಳಿತ ಮಂಡಳಿಯವರಿಗೆ ತಿಳಿಸಿದ್ರು ಪ್ರಯೋಜನವಾಗಿಲ್ಲ. ಹಾಗಾಗಿ ವಿದ್ಯಾರ್ಥಿನಿಯರು ಸೂಕ್ತ ಭದ್ರತೆ ನೀಡಬೇಕೆಂದು ಮುಂಜಾನೆಯಿಂದ ಕಿಮ್ಸ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಮ್ ಬಿ ಬಿ ಎಸ್ ಓದುತ್ತಿರುವ ವಿದ್ಯಾರ್ಥಿನಿಯರು ನಮಗೆ ಭದ್ರತೆ ನೀಡಬೇಕೆಂದು ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ಮಾಧ್ಯಮಗಳೊಂದಿಗೆ ಮಾತನಾಡಿ ಘಟನೆ ನಡೆದಿದ್ದು, ನಿಜ ಹಾಗಾಗಿ ಸಿಸಿಟಿವಿ ದೃಶ್ಯಗಳ ಆಧರಿಸಿ ತನಿಖೆ ಮಾಡುವಂತೆ ಆದೇಶ ಮಾಡಿರೋದಾಗಿ ಹೇಳಿದ್ದಾರೆ.

ಈ ಕುರಿತು ವಿದ್ಯಾನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಿಡಗೇಡಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕಿಮ್ಸ್ ನಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರು ಕಿಮ್ಸ್ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲಾ. ಏನಾದರೂ ಕಿಮ್ಸ್ ಆಡಳಿತ ಮಂಡಳಿ ಇಂತಹ ಘಟನೆಗಳು ತಡೆಗಟ್ಟಬೇಕಾಗಿದೆ…

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ..