ಗಗನಮುಖಿಯಾದ ಪೆಟ್ರೋಲ್-ಡಿಸೇಲ್ ದರ- ವಾಹನ ಸವಾರರು ಕಂಗಾಲು!

ದಿನ-ದಿನಕ್ಕೂ ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗುತ್ತಲೇ ಸಾಗುತ್ತಿದ್ದು, ವಾಹನ ಸವಾರರು ಕಂಗಲಾಗಿದ್ದಾರೆ. ಪ್ರತಿನಿತ್ಯ ಏರಿಕೆಯಾಗುತ್ತಲೇ ಇರೋ ಪೆಟ್ರೋಲ್ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳತೊಡಗಿದ್ದು, ಹತ್ತೆ ದಿನದಲ್ಲಿ ಪೆಟ್ರೋಲ್ 2.50 ರೂಪಾಯಿ ಹಾಗೂ ಡಿಸೇಲ್ ದರ 3 ರೂಪಾಯಿ ಏರಿಕೆಯಾಗಿದೆ.

ಇದೇ ಮೊದಲ ಬಾರಿಗೆ ಪೆಟ್ರೋಲ್ ದರ 86 ರೂಪಾಯಿ ದಾಟಿದ್ದು, ದೆಹಲಿ, ಮುಂಬೈನಲ್ಲಿ ದಾಖಲೆ ಏರಿಕೆ ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ. ಪ್ರಸಕ್ತ ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಗೆ ಪೆಟ್ರೋಲ್ ದರ, 81.98 ಪೈಸೆಯಷ್ಟಿದ್ದರೇ, ಡಿಸೇಲ್ ದರ ಪ್ರತಿ ಲೀಟರ್ ಗೆ 73.72 ಪೈಸೆಯಷ್ಟಿದೆ.

 

 

ಒಂದೇ ವರ್ಷದಲ್ಲಿ ಪೆಟ್ರೋಲ್ ದರ ಇಷ್ಟೊಂದು ಏರಿಕೆಯಾಗಿರೋದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಇನ್ನು ಪೆಟ್ರೋಲ್ ದರ ಏರಿಕೆಯಿಂದ ಇನ್ನೇನು ಸಧ್ಯದಲ್ಲೇ ಮತ್ತೆ ಸಾರಿಗೆ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ,. ಒಟ್ಟಿನಲ್ಲಿ ಅಚ್ಚೆ ದನದ ನೀರಿಕ್ಷೆಯಲ್ಲಿ ಜನರು ಕಂಗಾಲಾಗ್ತಿರೋದಂತು ಸತ್ಯ.