ತಂಗಿ ಮದುವೆಗೆ ರಜೆ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ವೈದ್ಯ! ಸಾವಿನ ಹಿಂದೆ ಕಿರುಕುಳ ಆರೋಪ!!

ಸಾವಿರಾರು ಜನರ ಪ್ರಾಣ ರಕ್ಷಿಸಬೇಕಿದ್ದ ವೈದ್ಯರೊಬ್ಬರು ಕ್ಷುಲಕ್ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣಾದಲ್ಲಿ ನಡೆದಿದೆ. ಕರ್ನಾಟಕ ಮೂಲದ ವೈದ್ಯನೊಬ್ಬ ತನ್ನ ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಹರಿಯಾಣಾದ ರೋಹ್ಟಕ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ad

ಮೂಲತಂ ಧಾರವಾಡ ಜಿಲ್ಲೆಯವರಾಗಿದ್ದ ವೈದ್ಯ ಓಂಕಾರ್ (30) , ಹರಿಯಾಣಾದಲ್ಲಿ ಎಂಡಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದರು. ತನ್ನ ಸಹೋದರಿ ವಿವಾಹಕ್ಕೆ ರಜೆ ನೀಡಲಿಲ್ಲ ಎಂಬ ಚಿಕ್ಕ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಕುರಿತಂತೆ ರೋಹ್ಟಕ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಕೈಲಾಶ್ ಚಂದರ್ ಹೇಳಿಕೆ ನೀಡಿದ್ದಾರೆ.

ಇನ್ನೂ ಓಂಕಾರ್ ತನ್ನ ಸಾವಿನ ವಿಚಾರವಾಗಿ ಯಾವುದೇ ಡೆತ್‍ನೋಟ್ ಬರೆದಿಲ್ಲ. ಆದರೆ ತಂಡದ ಮುಖ್ಯಸ್ಥೆ ಓಂಕಾರ್ ಗೆ ಕಿರುಕುಳ ನೀಡುತ್ತಿದ್ದರು ಎಂದು ಆತನ ಸಹದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಆರೋಪಿಸುತ್ತದ್ದು, ಹೀಗಾಗಿ ತಂಡದ ಮುಖ್ಯಸ್ಥೆಯ ಕಿರುಕುಳ ತಾಳಲಾರದೇ ಓಂಕಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದು ಹೇಳಲಾಗುತ್ತಿದೆ.

ಸದ್ಯ ಈ ಕೇಸ್ ಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇನ್ನೂ ವಿಚಾರಣೆ ನಡೆಯುತ್ತಿವ ಕಾರಣ ಯಾರನ್ನು ಸಹ ಬಂಧಿಸಿಲ್ಲ  ಎಂದು  ಪೊಲೀಸರು ತಿಳಿಸಿದ್ದಾರೆ. ಇನ್ನು ಓಂಕಾರ್ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಓಂಕಾರ್ ಸಹೋದ್ಯೋಗಿಗಳು ಒತ್ತಾಯಿಸಿದ್ದಾರೆ.