ಕೆಂಪುಕೋಟೆಯ ಮೇಲೆ ಮೋದಿಯಿಂದ ಧ್ವಜಾರೋಹಣ- ದೇಶಕ್ಕೆ ಆಯುಷ್ಮಾನ ಯೋಜನೆ ಕೊಡುಗೆ ಪ್ರಕಟಿಸಿದ ಪ್ರಧಾನಿ!

ದೇಶಾದ್ಯಂತ ಇವತ್ತು 72ನೇ ಸ್ವತಂತ್ರ ದಿನದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸ್ತಿದೆ. ಇನ್ನು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ್ರು. ಬಿಳಿಯ ಕುರ್ತಾ ಪೈಜಾಮ, ಕೇಸರಿ ಬಣ್ಣದ ಇಳಿಬಿಟ್ಟ ಪೇಟ ಧರಿಸಿದ್ದ ಮೋದಿ ಎಲ್ಲರ ಗಮನ ಸೆಳೆದ್ರು.
ಧ್ವಜಾರೋಹಣ ಬಳಿಕ ರಾಷ್ಟ್ರವನ್ನುದ್ದೇಶಿಸಿ ಒಂದೂವರೆ ಗಂಟೆ ಮಾತನಾಡಿದ ಮೋದಿ, ಇಂದು ಭಾರತ ವಿಶ್ವದ ಭೂಪಟದಲ್ಲಿ ಛಾಪು ಮೂಡಿಸಿದೆ. 2013ರಲ್ಲಿ ಇದ್ದ ಭಾರತ ಈಗ ಬಲದಾಗಿದೆ. ವಿಶ್ವಮಟ್ಟದಲ್ಲಿ ಭಾರತದ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತಿದೆ.

ಇಂದು ಬಲಿಷ್ಠ ಭಾರತವಾಗಿ ಪ್ರಜ್ವಲಿಸುತ್ತಿದೆ ಅಂದ್ರು. ದೇಶದಲ್ಲಿ ಯಾವುದೇ ಜಾಗದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ನಮ್ಮ ಯೋಧರು ಅಲ್ಲಿಗೆ ಹೋಗುತ್ತಾರೆ. ಗಡಿದಾಟಿ ಸರ್ಜಿಕಲ್ ಸ್ಟ್ರೈಕ್ ಮಾಡುವ ತಾಕತ್ತು ನಮ್ಮ ಸೇನೆಗಿದೆ. ಒಂದು ನಿರ್ದಿಷ್ಠ ಗುರಿ ಸೇನೆಗಿದೆ ಅಂತಂದ್ರು.
ಇದೇ ವೇಳೆ ಪ್ರಧಾನಿ ಮೋದಿ, ಆಯುಷ್ಮಾನ್ ಯೋಜನೆ ಘೋಷಣೆ ಮಾಡಿದರು.ಕೆಂಪು ಕೋಟೆಯಲ್ಲಿ ಆಯುಷ್ಮಾನ್ ಯೋಜನೆ ಘೋಷಿಸಿದ ನಮೋ, ಸೆಪ್ಟೆಂಬರ್​ 25ರಿಂದ ಆಯುಷ್ಮಾನ್ ಭಾರತ ಯೋಜನೆ ಜಾರಿಯಾಗಲಿದ್ದು, 10 ಕೋಟಿ ಕುಟುಂಬ, 50 ಕೋಟಿ ಮಂದಿಗೆ ಅನುಕೂಲವಾಗಲಿದೆ. ಗಂಭೀರ ರೋಗಗಳಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದ್ದು, ಕುಟುಂಬಕ್ಕೆ 5 ಲಕ್ಷ ರೂಪಾಯಿ ವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪ್ರಧಾನ ಮಂತ್ರಿ ಜನ್ ಆರೊಗ್ಯ ಸೇವೆ ಆರಂಭಿಸಲಾಗುವುದು ಎಂದರು.