ಸಿಎಂ ತವರಲ್ಲೇ ನಮೋ ದಾಖಲೆ ವಾರ್!!

ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ.

 ಫೆಬ್ರವರಿ 19ರಂದು ಮೈಸೂರಿಗೆ ಬರ್ತಿರೋ ಮೋದಿ ಸಿಎಂ ಸಿದ್ದರಾಮಯ್ಯ ತವರಿನಲ್ಲೇ ದಾಖಲೆಗಳನ್ನು ಬಹಿರಂಗಗೊಳಿಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯ ಭಾಷಣವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಸಮರ್ಥ ಭಾಷಾಂತರಕಾರರಿಗಾಗಿ ಹುಡುಕಾಟ ಆರಂಭಿಸಿದೆ. ಇತ್ತೀಚಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮೋದಿ, ರಾಜ್ಯದಲ್ಲಿರುವ ಕಾಂಗ್ರೆಸ್ 10 ಪರ್ಸೆಂಟ್​​ ಸರ್ಕಾರ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ದಾಖಲೆ ಇದ್ದರೇ ಬಿಡುಗಡೆ ಮಾಡುವಂತೆ ಸವಾಲು ಎಸೆದಿದ್ದರು.

ಈ ಸವಾಲು ಸ್ವೀಕರಿಸಿರುವ ಮೋದಿ ಇದೀಗ ಸಿಎಂ ತವರಿನಲ್ಲೆ ದಾಖಲೆ ಬಿಡುಗಡೆ ಮಾಡಲು ಮುಂಧಾಗಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಮೋದಿ ಬಿಡುಗಡೆ ಮಾಡುವ ದಾಖಲೆ ಹಾಗೂ ಮಾಹಿತಿ ಎಲ್ಲವೂ ಜನರಿಗೆ ಸರಿಯಾಗಿ ತಲುಪಬೇಕು ಎಂಬ ಕಾರಣಕ್ಕೆ ಬಿಜೆಪಿ ಮೋದಿ ಭಾಷಣವನ್ನು ಸಮಗ್ರವಾಗಿ ಹಾಗೂ ಸಮರ್ಥವಾಗಿ ಟ್ರಾನ್ಸಲೇಟ್​​ ಮಾಡುವವರಿಗಾಗಿ ಹುಡುಕಾಟ ನಡೆಸಿದೆ. ತನ್ನ ಭಾಷಣವನ್ನು ಸಮಗ್ರವಾಗಿ ಕನ್ನಡಿಗರಿಗೆ ಅರ್ಥ ಆಗುವಂತೆ ಅನುವಾದ ಮಾಡುವವರನ್ನು ಹುಡುಕುವಂತೆ ಸ್ವತಃ ಮೋದಿಯೇ ಸೂಚಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಮೋದಿ ಸಿಎಂ ವಿರುದ್ಧ ಭರ್ಜರಿ ದಾಖಲೆ ಬಿಡುಗಡೆ ಮಾಡುವ ಮುಜುಗರ ತರಲಿರೋದಂತು ಸತ್ಯ.

ಪ್ರತ್ಯುತ್ತರ ನೀಡಿ

Please enter your comment!
Please enter your name here