ರಾಜ್ಯದ ಮುಖ್ಯಕಾರ್ಯದರ್ಶಿಯನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ !! ರತ್ನಪ್ರಭಾರಂತಹ ಅಧಿಕಾರಿಗಳೇ ದೇಶದ ಭವಿಷ್ಯ !!

ಕರ್ನಾಟಕದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

 ರತ್ನ ಪ್ರಭಾ ಸೇವೆಯನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, ಇಂತಹ ಅಧಿಕಾರಿಗಳ ಸಂಖ್ಯೆ ಹೆಚ್ಚಬೇಕು ಎಂದಿದ್ದಾರೆ. ರತ್ನಪ್ರಭಾ ರಾಯಚೂರು ಡಿಸಿಯಾಗಿದ್ದಾಗ ಕುರಿಗಾಹಿಯನ್ನು ಶಾಲೆಗೆ ದಾಖಲಿಸಿದ್ದರು. ಕಾರಿನಲ್ಲಿ ಹೋಗುತ್ತಿದ್ದಾಗ ಬಾಲಕನೊಬ್ಬ ಕುರಿ ಮೇಯಿಸುತ್ತಿದ್ದನ್ನು ಕಂಡು ತುರ್ತು ಕ್ರಮ ಕೈಗೊಂಡಿದ್ದ ರತ್ನಪ್ರಭಾ, ಶಿಕ್ಷಕಿಯನ್ನು ಕರೆದು ಶಾಲೆಗೆ ಸೇರಿಸುವಂತೆ ಸೂಚಿಸಿದ್ದರು. ಮಾತ್ರವಲ್ಲದೆ ಶಾಲಾಭ್ಯಾಸ ಎಷ್ಟು ಮುಖ್ಯ ಎಂದು ಬಾಲಕನಿಗೆ ಮನವರಿಕೆ ಮಾಡಿದ್ದರು. ನಂತರ ರತ್ನಪ್ರಭಾ ಸೀನಿಯರ್ ಆಫೀಸರ್ ಆಗಿ ಈಗ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ.

ಮೊನ್ನೆ ಮೊನ್ನೆ ಮುಖ್ಯಕಾರ್ಯದರ್ಶಿ ಹುದ್ದೆ ಸ್ವೀಕರಿಸಿದಾಗ ಅದೇ ಹುಡುಗ ಪೊಲೀಸ್​ ಪೇದೆಯಾಗಿ ರತ್ನಪ್ರಭಾ ಎದುರು ಹಾಜರಾಗಿ, ಸಿಎಸ್​ ಆಗಿದ್ದಕ್ಕೆ ಅಭಿನಂದಿಸಲು ಬಂದಿದ್ದ. ಈ ಪೊಲೀಸ್​ ಪೇದೆ ನರಸಪ್ಪರನ್ನು ನೆನೆದು ರತ್ನಪ್ರಭಾ ಟ್ವೀಟ್ ಮಾಡಿದ್ದರು. ಆ ಟ್ವೀಟನ್ನು ಗಮನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ದೇಶಕ್ಕೆ ಇಂತಹ ಐಎಎಸ್​ ಅಧಿಕಾರಿಗಳು ಬೇಕೆಂದು ಪ್ರಧಾನಿ ಮೆಚ್ಚುಗೆ. ಇಡೀ ದೇಶದ ಐಎಎಸ್ ಅಧಿಕಾರಿಗಳಿಗೆ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ರತ್ನಪ್ರಭಾ ಮಾಧರಿಯಾಗಿದ್ದಾರೆ.