ಕಾಂಗ್ರೆಸ್ ಅನುಮತಿಯಿಲ್ಲದೇ ವರ್ಗಾವಣೆ ಇಲ್ಲ” – ಎಂ.ಬಿ. ಪಾಟಿಲ್ ಹೊಸ ವರಸೆ

Police can not transfer without 'Congress' permission

ಎಂ.ಬಿ ಪಾಟೀಲ್​​​ ಹೋಂ ಮಿನಿಸ್ಟರ್​ ಆದ ತಕ್ಷಣ ಖಡಕ್​​​​​ ಫರ್ಮಾನು ಜಾರಿ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ನವರ ಅನುಮತಿ ಇಲ್ಲದೇ ಐಪಿಎಸ್​ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆ​​​ ಮಾಡುವಂತಿಲ್ಲ. ಆದಾಗಿಯೂ ಮಾಡಿದರೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ಕಂಟಕ ಎದುರಾಗಬಹುದು. ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನೇ ರದ್ದು ಮಾಡಿ ಹೋಂ ಮಿನಿಸ್ಟರ್​​ ಎಂಬಿ ಪಾಟೀಲ್​​ ಇಲಾಖೆಗೆ ಸ್ಪಷ್ಟ ಎಚ್ಚರಿಕೆ ರವಾನಿದ್ದಾರೆ.

‘No more transfers’ without Congress permission

ಹುಬ್ಬಳ್ಳಿ-ಧಾರವಾಡ ಕಮಿಷನರ್​ ಆಗಿದ್ದ ಎಂ.ಎನ್.​ ನಾಗರಾಜ್ ಅವರನ್ನು ಸರ್ಕಾರ ಎತ್ತಂಗಡಿ ಮಾಡಿತ್ತು. ಆ ಜಾಗಕ್ಕೆ ಲೋಕೇಶ್​ ಕುಮಾರ್​​​ ನೇಮಕಗೊಂಡಿದ್ದರು. ಮತ್ತೊಂದೆಡೆ ಬೆಳಗಾವಿ ಪೊಲೀಸ್ ಕಮಿಷನರ್​​ ಡಿ.ಸಿ.ರಾಜಪ್ಪ ಕೂಡಾ ಟ್ರಾನ್ಸ್​ಫರ್​ ಆಗಿದ್ದರು. ಅಲ್ಲಿಗೆ ರಾಜೇಂದ್ರ ಪ್ರಸಾದ್ ನೇಮಕ ಆಗಿತ್ತು. ಈ ಎರಡೂ ವರ್ಗಾವಣೆಗಳನ್ನು ಎಂಬಿ ಪಾಟೀಲ್ ಸ್ಥಗಿತಗೊಳಿಸಿದ್ದಾರೆ​​​. ಯಾವುದೇ ಕಾರಣಕ್ಕೂ ನನ್ನ ಅನುಮತಿ ಇಲ್ಲದೇ ಐಪಿಎಸ್​ಗಳಾಗಲಿ ಅಥವಾ ಇತರೆ ಇನ್ಸ್​ಪೆಕ್ಟರ್​ಗಳನ್ನಾಗಲಿ ವರ್ಗಾವಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

ಹೋಂ ಮಿನಿಸ್ಟರ್​​​ ಆದೇಶಕ್ಕೆ ಗೃಹ ಇಲಾಖೆ ಬೆಚ್ಚಿಬಿದ್ದಿದೆ. ಈ ಮೊದಲು ಸಿಎಂ ಕುಮಾರಸ್ವಾಮಿ ಗೃಹ ಸಚಿವರ ಸಲಹೆ ಪಡೆಯದೇ ಹಲವು ವರ್ಗಾವಣೆಗಳನ್ನು ಮಾಡಿದ್ದರು. ಮೈಸೂರು ಕಮಿಷನರ್​​​ ಕೆಟಿ ಬಾಲಕೃಷ್ಣ ನೇಮಕವು ಮಾಜಿ ಸಿಎಂ ಸಿದ್ದರಾಮಯ್ಯಗೆ ತೀವ್ರ ಆಕ್ರೋಶ ಮೂಡಿಸಿತ್ತು. ಗೃಹ ಸಚಿವರ ಸೂಚನೆಯಿಂದಾಗಿ ಬೆಂಗಳೂರಿನ ಕ್ರೈಂ ಕಮಿಷನರ್​​​​ ಹಾಗೂ ಹಲವು ಡಿಸಿಪಿಗಳು, ಅಡಿಷನಲ್​​ ಕಮಿಷನರ್​ಗಳು ಹಾಗೂ ಹಲವು ಎಸ್​ಪಿಗಳ ವರ್ಗಾವಣೆ ಇದೀಗ ಸ್ಥಗಿತಗೊಂಡಿದೆ. ಎಂಬಿ ಪಾಟೀಲ್​ಗೆ ಕಾಂಗ್ರೆಸ್​ನ ಶಾಸಕರು, ಸಚಿವರು ಪ್ರಶಂಸಿಸುತ್ತಿದ್ದು, ಜೆಡಿಎಸ್​ ಮಾತ್ರ ಎಂದಿನಂತೆ ಅಸಮಾಧಾನ ಹೊರಗೆಡವಿದೆ.