ಕಿಡ್ನಾಪರ್ಸ್​​ ಮೇಲೆ ಗುಂಡಿನ ದಾಳಿ!

police Firing on Accused Persons
police Firing on Accused Persons

ಬೆಂಗಳೂರಿನಲ್ಲಿ ಮತ್ತೊಮ್ಮೆ ಪೊಲೀಸ್​ ಗನ್​ ಘರ್ಜಿಸಿದ್ದು, ಆತ್ಮರಕ್ಷಣೆಗಾಗಿ ಗುಂಡಿನದಾಳಿ ನಡೆಸಿದ ಪೊಲೀಸರು ಇಬ್ಬರು ಕಿಡ್ನಾಪರಗಳನ್ನು ಬಂಧಿಸಿದ್ದಾರೆ.

ಬೆಳ್ಳಂದೂರು ಬಳಿ ಘಟನೆ ನಡೆದಿದ್ದು, ಕಿಡ್ನಾಪ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸುವ ವೇಳೆ ಆರೋಪಿಗಳು ಪೊಲೀಸರ ಮೇಲೆ ಚಾಕು ಇರಿದಿದ್ದರು. ಹೀಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಕಿಡ್ನಾಪ್ ಪ್ರಕರಣದ ಆರೋಪಿಗಳಾದ ಶಂಕರ್​ ಹಾಗೂ ಸೆಲ್ವಕುಮಾರ್​ ಗಾಯಗೊಂಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಬೆಳ್ಳಂದೂರು ಕಿಡ್ನಾಪ್ ಪ್ರಕರಣದ ಅರೋಪಿಗಳ ಮೇಲೆ ಪೊಲೀಸರಿಂದ ಗುಂಡಿನ‌ದಾಳಿ.

ಈ ವೇಳೆ ಬೆಳ್ಳಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಗುಂಡು ಹಾರಿಸಿದ್ದಾರೆ. ಇದೀಗ ಗಾಯಾಳು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗಿನ ಜಾವ 3.45 ಕ್ಕೆ ಘಟನೆ ನಡೆದಿದೆ. ಚೂರು ಇರಿತದಿಂದ ಪೊಲೀಸ್ ಪೇದೆ ಮಹಾಂತೇಶ್​​ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಪರಪ್ಪನ ಅಗ್ರಹಾರದ ಸ್ಟ್ಯಾಂಡ್ ಪೋರ್ಡ್​​ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Avail Great Discounts on Amazon Today click here