ರೌಡಿಗಳ ಮನೆಗೆ ಕಾಲಿಟ್ಟ ಖಾಕಿ ಕಂಗಾಲ್- ಅಂತಹದ್ದೇನಿತ್ತು ನೀವೆ ನೋಡಿ!

ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡದಲ್ಲಿ ಕ್ರೈಂ ಚಟುವಟಕೆಗಳು ಹೆಚ್ಚಾಗುತ್ತಿದ್ದು, ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ರೌಡಿಗಳ ಮನೆಗಳನ್ನು ಜಾಲಾಡಲಾಗಿದೆ..ಹುಬ್ಬಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಬರ್ತಡೆ ಕೇಕ್ ಕಟ್ ಮಾಡುವುದು ಒಂದು ಟ್ರೆಂಡ್ ಆಗಿತ್ತು. ಹಾಗಾಗಿ ಅದಕ್ಕೆ ಬ್ರೇಕ್ ಹಾಕಲು ಇಂದು ಬೆಳ್ಳಂ ಬೆಳಗ್ಗೆ ರೌಡಿಗಳ‌‌ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದಾರೆ. ನಗರದ ವಿವಿಧ ಪ್ರದೇಶಗಳ ಮನೆಗಗಳ‌ ಮೇಲೆ ದಾಳಿ ನಡೆಸಿದ ಡಿಸಿಪಿಗಳಾದ ರೇಣುಕಾ ಸುಕುಮಾರ ಹಾಗೂ ನ್ಯಾಮಗೌಡರ, ಎಸಿಪಿಗಳಾದ ಹೆಚ್ ಕೆ ಪಠಾಣ್ ಹಾಗೂ ಎನ್ ಬಿ ಸಕ್ರಿ ಸಾಥ್ ನೇತೃತ್ವದಲ್ಲಿ ದಾಳಿ‌ ನಡೆಸಲಾಯಿತು..

ಕೇಶ್ವಾಪೂರ, ಆರ್ ಜಿಎಸ್ ಬಡಾವಣೆ ,ಹೊಸೂರು, ಸೆಟ್ಲಮೆಂಟ್, ಸೇರಿದಂತೆ ಅನೇಕ‌‌ ಕಡೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಮಾರಕಾಸ್ತ್ತಗಳು, ಪಿಸ್ತೂಲ್ ಸೇರಿದಂತೆ ಅಕ್ರಮ ಗಾಂಜಾ ಸಹ ಸಿಕ್ಕಿವೆ…ಇನ್ನೂ ವಿವಿಧ ಪೊಲೀಸ ಠಾಣೆಗಳಲ್ಲಿ ಅಪರಾಧ ಕೃತ್ಯಗಳು ಮಾಡಿ ಪೊಲೀಸ ಕಣ್ಣು ತಪ್ಪಿಸುತ್ತಿದ್ದಂತೆ ನಾಲ್ಕು ಆರೋಪಗಳನ್ನು ಸಹ ವಶಕ್ಕೆ ಪಡೆಯಲಾಗಿದರ.ದಾಳಿ ವೇಳೆ ಸಾಕಷ್ಟು ಪ್ರಮಾಣದಲ್ಲಿ ಮಾರಕಾಸ್ತ್ರಗಳಿಂದ ಸೇರಿದಂತೆ ಅಕ್ರಮ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರಿಗೆ ಬೇಕಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ..